
4 ಕಾಲುಗಳಿರುವ ಇರುವ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ ಮಹಿಳೆ!
Friday, December 16, 2022
ಗ್ವಾಲಿಯರ್(Headlines Kannada): ಮಹಿಳೆಯೊಬ್ಬರು 4 ಕಾಲು ಇರುವ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್'ನಲ್ಲಿ ನಡೆದಿದೆ.
ಸಿಕಂದರ್ ಕಂಪೂ ಪ್ರದೇಶದ ನಿವಾಸಿ ಆರತಿ ಕುಶ್ವಾಹ ಎಂಬ ಮಹಿಳೆ ಇಲ್ಲಿನ ಕಮಲ್ರಾಜ ಆಸ್ಪತ್ರೆಯಲ್ಲಿ ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಮಗುವಿಗೆ 4 ಕಾಲುಗಳಿವೆ. ಈ ನವಜಾತ ಶಿಶು ತೂಕ 2.3 ಕೆಜಿ ಇದ್ದು, ಆರೋಗ್ಯಕರವಾಗಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.