
ಉ#ಗ್ರರ ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು ? ಡಿಕೆಶಿ ಹೇಳಿಕೆಗೆ CM ಬೊಮ್ಮಾಯಿ ಆಕ್ರೋಶ
ಮಂಡ್ಯ(Headlines Kannada): ಮಂಗಳೂರಿನಲ್ಲಿ ಕುಕ್ಕರ್ ಬಾಂ#ಬ್ ಸ್ಫೋ#ಟ ಪ್ರಕರಣವನ್ನು ಬಿಜೆಪಿ ಸರಕಾರ ತನ್ನ ಭ್ರ#ಷ್ಟಾಚಾರವನ್ನು ಮುಚ್ಚಿ ಹಾಕಲು ಡೈವರ್ಟ್ ಮಾಡಿದೆ ಎಂದು ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಮಾತನಾಡಿದ್ದಾರೆ.
ಉ#ಗ್ರರ ವಿಚಾರದಲ್ಲಿ ಕಾಂಗ್ರೆಸ್ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲಿ ಯಾವುದೇ ಭ#ಯೋ#ತ್ಪಾದಕ ಕೃತ್ಯ ನಡೆದರೂ ಕಾಂಗ್ರೆಸಿನವರು ಇದೇ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಮನಸ್ಥಿತಿ ಆಗಿದೆ. ಶಾರಿಕ್ ಭ#ಯೋ#ತ್ಪಾದಕ ಅಲ್ಲದಿದ್ದರೆ, NIA ತನಿಖೆ ಯಾಕೆ ಸ್ವೀಕರಿಸುತ್ತಿತ್ತು? ರಾಜ್ಯದಲ್ಲಿ ಸರಕಾರ ನಡೆಸಿದವರಿಗೆ ಇದು ಗೊತ್ತಿರಬೇಕಿತ್ತು ಎಂದಿದ್ದಾರೆ.
ಮಂಡ್ಯದ ಪಾಂಡುಪುರ ತಾಲೂಕಿನಲ್ಲಿ ನಡೆಯುತ್ತಿರುವ ಜನಸಂಕಲ್ಪ ಕಾರ್ಯಕ್ರಮಕ್ಕೆ ಆಗಮಿಸಿದ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಶಂಕಿತ ಉ#ಗ್ರ ಶಾರಿಕ್ ವಿಷಯದಲ್ಲಿ ಡಿಕೆಶಿ ನೀಡಿರುವ ಹೇಳಿಕೆಯನ್ನು ಖಂಡಿಸಿ, ಉಗ್ರರ ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು ಎಂದು ಪ್ರಶ್ನಿಸಿದರು.
ಬೇರೆ ವಿಚಾರ ಡೈವರ್ಟ್ ಮಾಡುವ ಅಗತ್ಯ ನಮಗಿಲ್ಲ. ಅಲ್ಲದೇ ಶಾರಿಕ್ ವಿ#ಧ್ವಂ#ಸಕ ಕೃ#ತ್ಯಕ್ಕೆ ತಯಾರಾಗಿದ್ದ ಎಂಬುದಕ್ಕೆ ನಮ್ಮಲ್ಲಿ ಬೇಕಾದಷ್ಟು ಸಾಕ್ಷಿಗಳಿವೆ. ಕಾಂಗ್ರೆಸಿಗರಿಗೆ ಹೇಗೆ ಮಾತನಾಡಬೇಕೆಂಬ ಜ್ಞಾನ ಇಲ್ಲ, ಭಾರತ ಮತ್ತು ಚೀನಾ ಗಲಾಟೆಯಲ್ಲೂ ನಮ್ಮ ಯೋಧರ ಮನಸ್ಥಿತಿಯನ್ನು ಕುಗ್ಗಿಸುವ ರೀತಿಯಲ್ಲೇ ಕಾಂಗ್ರೆಸಿನವರು ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.