ಉಕ್ರೇನ್ ಮೇಲೆ ಮತ್ತೆ ದಾ#ಳಿಗೆ ಮುಂದಾಗಿರುವ ರಷ್ಯಾ; ಮಾತುಕತೆಯೊಂದೇ ಇರುವ ಏಕೈಕ ದಾರಿ: ಪುಟಿನ್'ಗೆ ಪ್ರಧಾನಿ ಮೋದಿ ಕರೆ
ನವದೆಹಲಿ(Headlines Kannada): ಉಕ್ರೇನ್ ಮೇಲೆ ಮತ್ತೆ ದಾ#ಳಿಗೆ ಮುಂದಾಗಿರುವುದಕ್ಕೆ ಮಾತುಕತೆಯೊಂದೇ ಇರುವ ಏಕೈಕ ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ಮನವಿ ಮಾಡಿದ್ದಾರೆ.
ರಾಜಧಾನಿ ಕೀವ್ ನಗರದ ಮೇಲೆ ಮತ್ತೆ ದಾ#ಳಿ ಆರಂಭಿಸಲು ರಷ್ಯಾ 200,000 ಹೊಸ ಪಡೆಗಳನ್ನು ಸಿದ್ಧಪಡಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಕೀವ್ ನಗರದ ಮೇಲೆ ದಾ#ಳಿ ನಡೆಸಲು ರಷ್ಯನ್ನರು 2 ಲಕ್ಷ ಹೊಸ ಪಡೆಗಳನ್ನು ಸಿದ್ದಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸರ್ಕಾರ ಹೇಳಿಕೆ ಪ್ರಕಟಿಸಿದ್ದು, ಪ್ರಧಾನಿ ಮೋದಿ- ರಷ್ಯಾ ಅಧ್ಯಕ್ಷ ಪುಟಿನ್ ಇಬ್ಬರೂ ದೂರವಾಣಿ ಮೂಲಕ ಈ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದೆ.
ಸಮರ್ ಖಂಡ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ (ಎಸ್ ಸಿಒ) ನಲ್ಲಿ ಮೋದಿ ಹಾಗು ಪುಟಿನ್ ದ್ವಿಪಕ್ಷೀಯ ಸಭೆ ನಡೆಸಿ ಇಂಧನ ಸಹಕಾರ, ವಾಣಿಜ್ಯ ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತಾ ಸಹಕಾರ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಈ ಸಭೆಯ ಬಳಿಕ ಈಗ ಮೋದಿ ಹಾಗು ಪುಟಿನ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.