ಮೋದಿ ತಾಯಿ ಹೀರಾಬೆನ್ ನಿ#ಧನ; ತಾಯಿ ಅಂ#ತ್ಯಸಂ#ಸ್ಕಾರ ನೆರವೇರಿದ ಪ್ರಧಾನಿ ಮೋದಿ
ಅಹ್ಮದಾಬಾದ್(Headlines Kannada): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾಯಿ ಹೀರಾಬೆನ್ ಮೋದಿಯವರು ಶುಕ್ರವಾರ ನಿ#ಧನರಾಗಿದ್ದು, ಅಂ#ತಿಮ ಸಂ#ಸ್ಕಾರ ನಡೆಸಲಾಯಿತು.
ಇಂದು ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರ ಮನೆಯಿಂದ ಹೀರಾಬೆನ್ ಅವರ ಅಂ#ತಿಮ ಯಾತ್ರೆ ಸಾಗಿತು. ಈ ವೇಳೆ ಪ್ರಧಾನಿ ಮೋದಿಯವರು ತಾಯಿಯ ಪಾ#ರ್ಥೀವ ಶರೀರಕ್ಕೆ ಹೆಗಲುಕೊಟ್ಟು ಮುನ್ನಡೆದರು.
ಪಾ#ರ್ಥೀವ ಶರೀರವನ್ನು ಗುಜರಾತಿನ ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಗೆ ತರಲಾಗಿತ್ತು. ಅಂ#ತಿಮ ದರ್ಶನದ ಬಳಿಕ ಸಂಪ್ರದಾಯದಂತೆ ಹೀರಾಬೆನ್ ಅವರ ಅಂ#ತ್ಯಸಂ#ಸ್ಕಾರವನ್ನು ವಿ#ಧಿವಿಧಾನಗಳ ಪ್ರಕಾರ ನೆರವೇರಿಸಲಾಯಿತು. ಕೊನೆಗೆ ಹೀರಾಬೆನ್ ಅವರು ಪಾ#ರ್ಥೀವ ಶರೀರಕ್ಕೆ ಪ್ರಧಾನಿ ಮೋದಿಯವರು ಅಗ್ನಿ ಸ್ಪರ್ಶ ಮಾಡಿದರು.
ಇತ್ತೀಚಿಗೆ ವ#ಯೋಸಹಜ ಕಾ#ಯಿಲೆಯಿಂದ ಬಳಲುತ್ತಿದ್ದ ಹೀರಾಬೆನ್ ಅವರನ್ನು ಬುಧವಾರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ 3.39ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ನಿ#ಧನರಾಗಿದ್ದಾರೆ.
ಶತಾಯುಷಿ ಹೀರಾಬೆನ್ ಅವರು 5 ಮಂದಿ ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸದ್ಯ ಮೋದಿ ತಾಯಿ ಹೀರಾಬೆನ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದು, ಗಣ್ಯರು ಸಂ#ತಾಪಗಳನ್ನು ಸೂಚಿಸುತ್ತಿದ್ದಾರೆ.