ಒಕ್ಕಲಿಗ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಕೆಟಗರಿ ಸೃಷ್ಟಿ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
ಬೆಳಗಾವಿ(Headlines Kannada): ಮುಂಬರುವ ಚುನಾವಣೆಯನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ 2 ಪ್ರಬಲ ಸಮುದಾಯವೆಂದೇ ಗುರುತಿಸಿಕೊಂಡಿರುವ ಒಕ್ಕಲಿಗ ಹಾಗೂ ಲಿಂಗಾಯತ ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ BJP ಸರ್ಕಾರ ಎರಡು ಪ್ರತ್ಯೇಕ ಕೆಟಗರಿ ಮಾಡಿದೆ.
3Aನಲ್ಲಿದ್ದ ಒಕ್ಕಲಿಗರಿಗೆ ಹೊಸದಾಗಿ 2C ಕೆಟಗರಿ ಮತ್ತು 3Bನಲ್ಲಿದ್ದ ಲಿಂಗಾಯತರಿಗೆ 2D ಕೆಟಗರಿ ರಚಿಸಲು ಗುರುವಾರ (ಡಿಸೆಂಬರ್ 29) ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
3Aನಲ್ಲಿದ್ದ ಒಕ್ಕಲಿಗರಿಗೆ 2C ಮೀಸಲಾತಿ ನೀಡಲು ಹಾಗು 3Bನಲ್ಲಿದ್ದ ಲಿಂಗಾಯತರಿಗೆ 2D ಮೀಸಲಾತಿ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ. 2Aನಲ್ಲಿರುವ 102 ಪಂಗಡಗಳ ಮೀಸಲಾತಿಗೆ ಯಾವುದೇ ಧಕ್ಕೆ ಆಗಲ್ಲ, 2ಎ ನಲ್ಲಿರುವ 102 ಪಂಗಡಗಳ ಮೀಸಲಾತಿ ಟಚ್ ಮಾಡುವುದಿಲ್ಲ ಎಂದಿರುವ ಸಚಿವರು, ಯಾವುದೇ ಸಮುದಾಯದ ಮೀಸಲಾತಿಯಲ್ಲಿ ಬದಲಾಗಲ್ಲ. EWSನಲ್ಲಿರುವ ಶೇ.10ರಷ್ಟು ಮೀಸಲಾತಿಯಲ್ಲಿ ಎಷ್ಟು ಉಳಿಯುತ್ತೋ ಅದನ್ನು 2ಸಿ ಹಾಗೂ 2ಡಿಗೆ ಶಿಫ್ಟ್ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.