
ಮೂಲ್ಕಿ, ಬೆಳ್ತಂಗಡಿ, ಬಂಟ್ವಾಳದ ನೇತ್ರಾವತಿ ನದಿಯ ದಡದ ಹಲವೆಡೆ ಲೋಕಾಯುಕ್ತ ದಾ#ಳಿ; ದೋಣಿ, ಟ್ರಕ್, 40 ಲಕ್ಷ ಮೌಲ್ಯದ ಮರಳು ವಶ
ಮಂಗಳೂರು(Headlines Kannada): ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಬೆಳ್ತಂಗಡಿ ಹಾಗು ಬಂಟ್ವಾಳದ ನೇತ್ರಾವತಿ ನದಿಯ ದಡದ ಹಲವೆಡೆ ಗುರುವಾರ ರಾತ್ರಿ ವೇಳೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಅಕ್ರಮ ಮರಳು ಸಾಗಣೆಗೆ ಬಳಸುತ್ತಿದ್ದ ದೋಣಿಗಳು ಮತ್ತು ಟ್ರಕ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಮರಳು ದಂ#ಧೆ ಕುರಿತುಲವು ದೂರುಗಳ ಹಿನ್ನೆಲೆಯಲ್ಲಿ ಡಿವೈಎಸ್ಪಿ ಕಲಾವತಿ, ಡಿವೈಎಸ್ಪಿ ಚೆಲುವರಾಜು ಬಿ, ಇನ್ಸ್ ಪೆಕ್ಟರ್ ಅಮಾನುಲ್ಲಾ ನೇತೃತ್ವದ 3 ತಂಡಗಳು ಮೂಲ್ಕಿ, ಬೆಳ್ತಂಗಡಿ, ಬಂಟ್ವಾಳದ ಹಲವೆಡೆ ದಾಳಿ ನಡೆಸಿ ವಶಪಡಿಸಿಕೊಂಡಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ 2 ಟ್ರಕ್ ಹಾಗೂ 1 ಬೋಟ್ ವಶಪಡಿಸಿಕೊಳ್ಳಲಾಗಿದೆ. ಆದರೆ ದಾಳಿ ವೇಳೆ ಆರೋಪಿಗಳು ಪ#ರಾರಿ#ಯಾಗಿದ್ದು, 40 ಲಕ್ಷ ಮೌಲ್ಯದ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮೂರು ಕ್ರಿ#ಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
''ಅಕ್ರಮ ಮರಳು ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟವಾಗುತ್ತಿದ್ದು, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಲೋಕಾಯುಕ್ತ, ಮಂಗಳೂರು ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್ ಹೇಳಿದ್ದಾರೆ.