182 ಸದಸ್ಯರಿರುವ ಗುಜರಾತ್ ಚುನಾವಣೆಯಲ್ಲಿ ಈ ಬಾರಿ ಆಯ್ಕೆಯಾಗಿದ್ದು ಏಕೈಕ ಮುಸ್ಲಿಂ ಶಾಸಕ! ಕಳೆದ ಬಾರಿ ಎಷ್ಟು ಮುಸ್ಲಿಂ ಶಾಸಕರಿದ್ದರು ಗೊತ್ತೇ..?

182 ಸದಸ್ಯರಿರುವ ಗುಜರಾತ್ ಚುನಾವಣೆಯಲ್ಲಿ ಈ ಬಾರಿ ಆಯ್ಕೆಯಾಗಿದ್ದು ಏಕೈಕ ಮುಸ್ಲಿಂ ಶಾಸಕ! ಕಳೆದ ಬಾರಿ ಎಷ್ಟು ಮುಸ್ಲಿಂ ಶಾಸಕರಿದ್ದರು ಗೊತ್ತೇ..?


ಅಹಮದಾಬಾದ್(Headlines Kannada):  ಗುಜರಾತಿನಲ್ಲಿ ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿರೂಢ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಈ ಬಾರಿ ಆಯ್ಕೆಯಾಗಿದ್ದು ಮಾತ್ರ ಏಕೈಕ ಮುಸ್ಲಿಂ ಅಭ್ಯರ್ಥಿ!

ಅವರೇ ಕಾಂಗ್ರೆಸ್‌ನ ಇಮ್ರಾನ್ ಖೇಡವಾಲಾ.  ಈಗ ಗುಜರಾತಿನ  ಏಕೈಕ ಮುಸ್ಲಿಂ ಶಾಸಕರಾಗಿದ್ದಾರೆ. ಕಳೆದ ವಿಧಾನಸಭೆಯಲ್ಲಿ 3  ಮಂದಿ ಮುಸ್ಲಿಂ ಶಾಸಕರಿದ್ದರು ಮತ್ತು ಅವರೆಲ್ಲರೂ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಈಗ ಅದು ಒಂದು ಸ್ಥಾನಕ್ಕೆ ಬಂದು ನಿಂತಿದೆ.

ಅಹಮದಾಬಾದ್ ನಗರದ ಜಮಾಲ್‌ಪುರ್-ಖಾಡಿಯಾ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕರಾಗಿರುವ ಖೇಡವಾಲಾ ಅವರು 13,658 ಮತಗಳ ಅಂತರದಿಂದ ಗೆದ್ದು ಶಾಸಕ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಖೇಡವಾಲಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಭೂಷಣ್ ಭಟ್ ಅವರನ್ನು ಮುಸ್ಲಿಂ ಬಾಹುಳ್ಯವಿರ್ವ ತಮ್ಮ ಕ್ಷೇತ್ರದಲ್ಲಿ ಸೋಲಿಸಿದ್ದಾರೆ. ಅಲ್ಲಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ರಾಜ್ಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಸಬೀರ್ ಕಬ್ಲಿವಾಲಾ ಕೂಡ ಕಣದಲ್ಲಿದ್ದು ಸೋಲು ಕಂಡಿದ್ದಾರೆ.

ಈ ಬಾರಿ 3 ಮಂದಿ  ಹಾಲಿ ಶಾಸಕರು ಸೇರಿದಂತೆ ಒಟ್ಟು 6 ಮುಸ್ಲಿಂ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಈ ಪೈಕಿ ಇಬ್ಬರು ಶಾಸಕರು ಸೇರಿದಂತೆ ಐವರು ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಗುಜರಾತ್‌ನಲ್ಲಿ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ ಹತ್ತರಷ್ಟು ಮುಸ್ಲಿಮರಿದ್ದಾರೆ.

Ads on article

Advertise in articles 1

advertising articles 2

Advertise under the article