ತೆಲಂಗಾಣದಲ್ಲಿ ಯುವತಿಯನ್ನು ಆಕೆಯ ಮನೆಯಿಂದ ಅಪ#ಹರಿ#ಸಿದ ನೂರಾರು ಜನರ ಗುಂಪು ! ಇಲ್ಲಿದೆ ವೀಡಿಯೊ

ತೆಲಂಗಾಣದಲ್ಲಿ ಯುವತಿಯನ್ನು ಆಕೆಯ ಮನೆಯಿಂದ ಅಪ#ಹರಿ#ಸಿದ ನೂರಾರು ಜನರ ಗುಂಪು ! ಇಲ್ಲಿದೆ ವೀಡಿಯೊ


ಹೈದರಾಬಾದ್(Headlines Kannada):  ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ಮನೆಗೆ ನುಗ್ಗಿದ ಸುಮಾರು 100 ಜನರ ಗುಂಪು ಶುಕ್ರವಾರ 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದ ಅಪ##ರಿಸಿರುವ ಘಟನೆ ನಡೆದಿದೆ.

ವೈಶಾಲಿ ಎಂಬ ಯುವತಿಯನ್ನು ಅಪ#ಹರಿ#ಸಲಾಗಿದೆ. ಆಕೆಯ ಪೋಷಕರು ನೀಡಿರುವ ದೂರಿನ ಪ್ರಕಾರ, ಸುಮಾರು 100 ಪುರುಷರು ಅವರ ಮನೆಗೆ ನುಗ್ಗಿ ಅವರ ಮನೆಗಳನ್ನು ಧ್ವಂ#ಸ#ಗೊಳಿಸಿದ್ದು, . ನಂತರ ಬಲ#ವಂ#ತವಾಗಿ ಅವರ ಮಗಳು ವೈಶಾಲಿಯನ್ನು ಮನೆಯಿಂದ ಎಳೆದುಕೊಂಡು ಹೋಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗಿದ್ದು, ಪುರುಷರ ಗುಂಪೊಂದು ಯುವತಿಯ ಸಂಬಂಧಿಕರಿಗೆ ಥಳಿ#ಸುವ ದೃ#ಶ್ಯ ಕಂಡು ಬರುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 16 ಮಂದಿ ಆರೋಪಿಗಳನ್ನು ಬಂ#ಧಿಸಲಾಗಿದ್ದು, 6 ಗಂಟೆಯೊಳಗೆ ಯುವತಿಯನ್ನು ರಕ್ಷಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರರನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಟ್ವಿಸ್ಟ್....

ಪ್ರಕರ#ಣದ ಪ್ರಮುಖ ಆರೋಪಿಯಾಗಿರುವ 26 ವರ್ಷದ ನವೀನ್ ರೆಡ್ಡಿ ಈಗಾಗಲೇ ವೈಶಾಲಿಯೊಂದಿಗೆ ಮದುವೆಯಾಗಿರುವುದಾಗಿ ತಿಳಿಸಿದ್ದಾನೆ. ನಾನು ನನ್ನ ಹೆಂಡ#ತಿಯನ್ನು ಮನೆಗೆ ಕರೆದುಕೊಂಡು ಹೋಗಲು ತುಂಬಾ ಪ್ರಯತ್ನಿಸಿದೆ. ಆಕೆ ಡೆಂಟಿಸ್ಟ್​ ಆದ ಬಳಿಕ ಆಕೆಯ ಅಪ್ಪ-ಅಮ್ಮ ಅವಳ ಮನಸನ್ನು ಬದಲಾಯಿಸಿ, ನನ್ನಿಂದ ದೂರ ಮಾಡಿದ್ದಾರೆ ಎಂದಿರುವ ನವೀನ ರೆಡ್ಡಿ, ಹೀಗಾಗಿ, ಅವರ ಮನೆಗೆ ನು#ಗ್ಗಿ ಆಕೆಯನ್ನು ಎಳೆದುಕೊಂಡು ಹೋಗಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿಗಳ ವಿರುದ್ಧ ಕೊ#ಲೆ ಯತ್ನ ಹಾಗು ಅಪ#ಹರಣ ಸೇರಿದಂತೆ ಇತರೆ ಆರೋ#ಪದಡಿ ಪ್ರಕರಣ ದಾಖಲಿಸಲಾಗಿದೆ. 

Ads on article

Advertise in articles 1

advertising articles 2

Advertise under the article