ಇಂದ್ರಾಳಿಯಲ್ಲಿ ಮನೆಗೆ ನುಗ್ಗಿ ನಗರಸಭೆಯ ಮಾಜಿ ಅಧ್ಯಕ್ಷೆಯ ಪತಿಗೆ ಮಾ#ರಣಾಂತಿಕ ಹ#ಲ್ಲೆ ನಡೆಸಿದ ಯುವಕ
Thursday, December 15, 2022
ಉಡುಪಿ (Headlines Kannada): ಇಲ್ಲಿನ ಮನೆಯೊಂದಕ್ಕೆ ನುಗ್ಗಿದ ಯುವಕನೋರ್ವ ನಗರಸಭೆಯ ಮಾಜಿ ಅಧ್ಯಕ್ಷೆಯ ಪತಿಗೆ ಕಬ್ಬಿಣದ ಸಾಲಕೆಯಿಂದ ಮಾ#ರಣಾಂತಿಕವಾಗಿ ಹ#ಲ್ಲೆ ನಡೆಸಿದ ಘಟನೆ ಇಂದ್ರಾಳಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯಕ್ ಅವರ ಪತಿ 54ವರ್ಷದ ಕೃಷ್ಣ ನಾಯಕ್ ಎಂಬವರು ಹ#ಲ್ಲೆಗೊಳಗಾದ ವ್ಯಕ್ತಿ. ನೆರೆಮನೆಯ ನಿವಾಸಿ 23 ವರ್ಷದ ಅರ್ಜುನ್ ಹ#ಲ್ಲೆಗೈದ ಆರೋಪಿ.
ಕೃಷ್ಣ ಎಂಬಾವರು ಗುರಾಯಿಸಿ ನೋಡಿದರೆಂಬ ಕಾರಣಕ್ಕೆ ಆರೋಪಿ ಅರ್ಜುನ್ ಈ ಕೃ#ತ್ಯ ನಡೆಸಿದ್ದಾನೆ ಎನ್ನಲಾಗಿದೆ. ಹ#ಲ್ಲೆಯಿಂದ ಗಂ#ಭೀರವಾಗಿ ಗಾಯಗೊಂಡ ಕೃಷ್ಣ ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಮಣಿಪಾಲ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.