ಸಂಘಪರಿವಾರದ ಕಾರ್ಯಕರ್ತರಿಂದ ಪ್ರಯಾಣಿಕನಿಗೆ ಹ#ಲ್ಲೆ; ಪೊಲೀಸ್ ನಿರ್ಲಕ್ಷವೇ ಇದಕ್ಕೆ ಪ್ರೇರಣೆ: ದ.ಕ. ಜಿಲ್ಲಾ ಮುಸ್ಲಿಮ್ ವರ್ತಕರ ಸಂಘ

ಸಂಘಪರಿವಾರದ ಕಾರ್ಯಕರ್ತರಿಂದ ಪ್ರಯಾಣಿಕನಿಗೆ ಹ#ಲ್ಲೆ; ಪೊಲೀಸ್ ನಿರ್ಲಕ್ಷವೇ ಇದಕ್ಕೆ ಪ್ರೇರಣೆ: ದ.ಕ. ಜಿಲ್ಲಾ ಮುಸ್ಲಿಮ್ ವರ್ತಕರ ಸಂಘ


ಮಂಗಳೂರು(Headlines Kannada): ಮುಸ್ಲಿಮರನ್ನೇ ಗುರಿಯಾಗಿಸಿ ಮಾರಣಾಂತಿಕ ಹ#ಲ್ಲೆ ನಡೆಸುವ, ಕಪೋಲ ಕಲ್ಪಿತ ಆರೋಪಗಳನ್ನು ಅವರ ಮೇಲೆ ಹೊರಿಸುವ, ಮುಸ್ಲೀಮರನ್ನು ಬಹಿರಂಗವಾಗಿಯೇ ನಿಂದಿಸುವ ಮತ್ತು ಅವರನ್ನು ಅಪಹಾಸ್ಯಕ್ಕೆ ಈಡು ಮಾಡುವ ಪ್ರಕ್ರಿಯೆಗಳು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿವೆ ಎಂದು ದ.ಕ. ಜಿಲ್ಲಾ ಮುಸ್ಲಿಮ್ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಆರೋಪಿಸಿದ್ದಾರೆ.

ಇದರ ಮುಂದುವರಿದ ಭಾಗ ಎಂಬಂತೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಮುಲ್ಲರಪಟ್ನ ನಿವಾಸಿ ಇಸಾಕ್ ಮೇಲೆ ಬಸ್ ಕಂಡೆಕ್ಟರ್ ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರು ಮಾರ#ಣಾಂತಿಕವಾಗಿ ಹ#ಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ ಎಂದು ಅವರು ದೂರಿದ್ದಾರೆ.  

ಈ ರೀತಿ ಹ#ಲ್ಲೆ ನಡೆಸುವವರ ವಿರುದ್ದ ಪೊಲೀಸ್ ಇಲಾಖೆಯಿಂದ ಕಠಿಣ ಕಾನೂನು ಕ್ರಮ ಜರಗಿಸದೆ ಠಾಣೆಯಲ್ಲಿಯೇ ಜಾಮೀನು ನೀಡಿ ಬಿಡಬಹುದಾದ ಸಾಮಾನ್ಯ ಕೇಸ್ ದಾಖಲಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಈ ರೀತಿಯ ನಿರ್ಲಕ್ಷ್ಯದಿಂದಲೇ   ಸಂಘಪರಿವಾರದವರು ಮತ್ತೆ ಮತ್ತೆ ಕಾನೂನು ಕೈಗೆತ್ತಿಕೊಳ್ಳುವಂತೆ ಪ್ರೋತ್ಸಾಹ ಸಿಗುತ್ತಿದೆ. ಇದು ಹೀಗೆಯೇ ಮುಂದುವರಿದೆರೆ ಇಲ್ಲಿ ಮುಸ್ಲಿಮರು ಜೀವಿಸುವುದಾದರೂ ಹೇಗೆ? 

ಇದಕ್ಕೆ ಮುಸ್ಲಿಮರೇನಾದರೂ ರಕ್ಷಣಾತ್ಮಕ ಪ್ರತಿಕ್ರಿಯೆ ನೀಡಿದರೆ ಅವರ ವಿರುದ್ಧ ದೇ#ಶದ್ರೋ#ಹ, ಭ#ಯೋ#ತ್ಪಾದನೆಯಂತಹ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದನ್ನು ಇನ್ನೆಷ್ಟು ದಿನ ಸಹಿಸಿಕೊಂಡಿರುವುದು. 

ಮುಖ್ಯಮಂತ್ರಿಯೇ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳುತ್ತಿರುವಾಗ ಆಡಳಿತದಲ್ಲಿ ಇರುವವರೂ ನಮ್ಮ ಸಹಾಯಕ್ಕೆ ಬರುತ್ತಾರೆ ಎಂದುಕೊಳ್ಳುವಂತೆಯೇ ಇಲ್ಲ ಎಂದು ಅಲಿ ಹಸನ್ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article