
ಶಾರುಖ್ ನಟನೆಯ ‘ಪಠಾಣ್’ ಸಿನಿಮಾದ ‘ಬೇಷರಂ ರಂಗ್’ ವಿವಾದ; 'ನಾವು ಇದನ್ನೆಲ್ಲಾ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು': ಅಂಧಭಕ್ತರ ವಿರುದ್ಧ ಪ್ರಕಾಶ್ ರಾಜ್ ಗರಂ
ಈ ಹಾಡಿಗೆ ಕೆಲವರು ತಕರಾರು ತೆಗೆದಿದ್ದಾರೆ. ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದ ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣ ಬಿ#ಕಿನಿ ಧರಿಸಿದ್ದನ್ನು 1 ವರ್ಗದ ಮಂದಿ ವಿರೋಧಿಸಿದ್ದಾರೆ. ‘ಇಂಥದ್ದನ್ನೆಲ್ಲ ಇನ್ನೂ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು’ ಎಂದು ಪ್ರಕಾಶ್ ರಾಜ್ ತನ್ನ ಆಕ್ರೋಶವನ್ನು ಹೊರಹಾಕಿದ್ದಾರೆ.
‘ಬೇಷರಂ ರಂಗ್..’ ಹಾಡು ಬಿಡುಗಡೆಯಾದ ಕ್ಷಣದಿಂದಲೂ ದೊಡ್ಡ ಹವಾವನ್ನೇ ಸೃಷ್ಟಿಸಿದೆ. ಯೂಟ್ಯೂಬ್ನಲ್ಲಿ ಈವರೆಗೆ 4.2 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡು ದಾಖಲೆ ಮಾಡಿದೆ. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡ ರೀತಿ ಅ#ಶ್ಲೀ#ಲವಾಗಿದೆ ಎಂಬುದು ಕೆಲವರ ವಾದ. ಅಲ್ಲದೇ ಕೇಸರಿ ಬಣ್ಣದ ಬಿಕಿಸಿ ಧರಿಸಿ ‘ಬೇಷರಂ ರಂಗ್’ (ನಾಚಿಕೆ ಇಲ್ಲದ ಬಣ್ಣ) ಎಂದು ಹಾಡಿರುವುದನ್ನು ಬಲಪಂಥಿಯ ಸಂಘಟನೆಗಳು ಖಂಡಿಸಿವೆ.
ಈ ವಿವಾದದ ಕುರಿತಾಗಿ ಪ್ರಕಟ ಆಗಿರುವ ಸುದ್ದಿಯನ್ನು ಪ್ರಕಾಶ್ ರಾಜ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಅಸಹ್ಯಕರ.. ಇದನ್ನೆಲ್ಲ ನಾವು ಇನ್ನೂ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು? ಬಣ್ಣದ ಕುರುಡುತನ’ ಎಂದು ತನ್ನ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ #AndhBhakts ಮತ್ತು #justasking ಹ್ಯಾಷ್ಟ್ಯಾಗನ್ನು ಪ್ರಕಾಶ್ ರಾಜ್ ಬಳಸಿದ್ದಾರೆ.
‘ಪಠಾಣ್’ ಚಿತ್ರದ ಮೂಲಕ ಶಾರುಖ್ ಖಾನ್ ಮತ್ತೆ ತನ್ನ ಹವಳವನ್ನು ಉಳಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಸಿನಿಮಾ 2023ರ ಜನವರಿ 25ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಆದರೆ ಅದಕ್ಕೂ ಮುನ್ನವೇ ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಸಂಘಪರಿವಾರದ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದು, ಟ್ವಿಟರ್ನಲ್ಲಿ #BoycottPathan ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ.
‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಶಾರುಖ್ ಖಾನ್ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಸಿನೆಮಾದಲ್ಲಿ ಮುಖ್ಯ ಪಾತ್ರದಲ್ಲಿ ಜಾನ್ ಅಬ್ರಾಹಂ ಕೂಡಾ ಅಭಿನಯಿಸಿದ್ದಾರೆ. ಈಗಾಗಲೇ ಸಿನೆಮಾ ಟೀಸರ್ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದರು.