ಸಮಾಜದಲ್ಲಿ ಭಯವನ್ನು ಹರಡುವುದೇ RSS ಹಾಗೂ ಬಿಜೆಪಿಯ ಉದ್ದೇಶ: ರಾಹುಲ್ ಗಾಂಧಿ
Thursday, December 15, 2022
ನವದೆಹಲಿ (Headlines Kannada): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ RSS ಬಗ್ಗೆ ಮಾತನಾಡಿದ್ದು, RSS ಸಂಘಟನೆ ಮಹಿಳೆಯರನ್ನು ಹತ್ತಿಕ್ಕುವ ಸಂಘಟನೆಯಾಗಿದೆ, ಆದ್ದರಿಂದಲೇ ಅಲ್ಲಿ ಮಹಿಳಾ ಸದಸ್ಯರಿಲ್ಲ ಎಂದು ದೂರಿದ್ದಾರೆ.
ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ರಾಹುಲ್ ಗಾಂಧಿ, RSS ಹಾಗೂ ಬಿಜೆಪಿಯ ಉದ್ದೇಶ ಭಯವನ್ನು ಹರಡುವುದಾಗಿದೆ ಹಾಗೂ ತಮ್ಮ ಭಾರತ್ ಜೋಡೋ ಯಾತ್ರೆ ದ್ವೇಷ ಹಾಗೂ ಭಯದ ವಿರುದ್ಧ ನಿಲ್ಲುವುದಾಗಿದೆ ಎಂದು ಹೇಳಿದ್ದಾರೆ.
ಸೆ.7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡ ಭಾರತ್ ಜೋಡೋ ಯಾತ್ರೆ ಶುಕ್ರವಾರದಂದು 100 ದಿನಗಳನ್ನು ಪೂರೈಸಲಿದ್ದು, ಬುಧವಾರದಂದು ಯಾತ್ರೆ ಸವಾಯಿ ಮಾಧೋಪುರ್ ನ್ನು ತಲುಪಿದೆ.