ದುಬೈಯಲ್ಲಿ ಫೆ.5 ರಂದು ನಡೆಯಲಿದೆ 'TPL -2023' ಥ್ರೋಬಾಲ್ ಪ್ರೀಮಿಯರ್‌ ಲೀಗ್

ದುಬೈಯಲ್ಲಿ ಫೆ.5 ರಂದು ನಡೆಯಲಿದೆ 'TPL -2023' ಥ್ರೋಬಾಲ್ ಪ್ರೀಮಿಯರ್‌ ಲೀಗ್

ದುಬೈ : ಯು.ಎ.ಇ. ಥ್ರೋಬಾಲ್ ಗ್ರೂಪ್ ಅಯೋಜಿಸಿರುವ ಫೆಬ್ರವರಿ 5 ರಂದು ದುಬೈನಲ್ಲಿ ಜರಗಲಿರುವ 'ಥ್ರೋಬಾಲ್ ಪ್ರೀಮಿಯರ್‌ ಲೀಗ್ - 2023 ' (TPL -2023) ಪಂದ್ಯಾಟದ ಪೂರ್ವಭಾವಿ  ಹಾಗೂ ಸಮಾಲೋಚನ ಸಭೆ ಡಿ.10 ರಂದು ಜರುಗಿತು.
ಈ ವರ್ಷದ 'TPL 2023' -ಚಾಂಪಿಯನ್‌ಶಿಪ್ ಟ್ರೋಫಿಯನ್ನು ಎತ್ತಿ ಹಿಡಿಯಲು 6 ಪುರುಷರು ಮತ್ತು 6 ಮಹಿಳಾ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ. ಎಲ್ಲಾ ನೋಂದಾಯಿತ ಆಟಗಾರರ ಹರಾಜು ಪ್ರಕ್ರಿಯೆ ಡಿ.10 ರಂದು TPL ಸಂಘಟನಾ ಸಮಿತಿಯೊಂದಿಗೆ ಪ್ರತಿ ತಂಡಕ್ಕೆ ಮಾಲೀಕರು, ವ್ಯವಸ್ಥಾಪಕರು ಮತ್ತು ಐಕಾನ್ ಆಟಗಾರರ ಉಪಸ್ಥಿತಿಯಲ್ಲಿ ನಡೆಯಿತು.

ವಿಜೇತರಿಗೆ ನಗದು ಬಹುಮಾನದೊಂದಿಗೆ TPL ಚಾಂಪಿಯನ್ 2023 ಕಿರೀಟವನ್ನು ತೊಡಿಸಲಾಗುವುದು. ರನ್ನರ್ಸ್‌ಅಪ್‌ಗಳಿಗೂ ವಿಶೇಷ ಬಹುಮಾನ ನೀಡಲಾಗುವುದು. ಇದರ ಜೊತೆಗೆ ಪಂದ್ಯಗಳ ಸಮಯದಲ್ಲಿ ವಿವಿಧ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಪಂದ್ಯಗಳು ನಡೆಯುವಾಗ ವೀಕ್ಷಕರಿಗೆ ಮನರಂಜನೆಗಾಗಿ ವಿವಿಧ ಅತ್ಯಾಕರ್ಷಕ ಕಾರ್ಯಕ್ರಮಗಳು ಜರಗಲಿದೆ.

ಫೆ.5 ರಂದು ದುಬೈಯ ಅಲ್ ಇತ್ತಿಹಾದ್ ಸ್ಕೂಲ್ ಮಮ್ಜಾರ್ ನಲ್ಲಿ ಜರಗಲಿರುವ ಈ ಪಂದ್ಯಾಟದಲ್ಲಿ ಯು.ಎ.ಈ.ಯಲ್ಲಿರುವ ಎಲ್ಲಾ ಕನ್ನಡ-ತುಳು ಸಂಘ ಸಂಸ್ಥೆಗಳು ಸಹಕರಿಸಬೇಕು ಹಾಗೂ ಪಂದ್ಯಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಟಿ.ಪಿ.ಎಲ್.2023 ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ವಿವರಕ್ಕಾಗಿ: Sarvotham Shetty (050 612 5464), Santosh Shetty (050 659 3826), Jayashree Shetty (050 864 1279), Alan Mendonca (050 685 6067), Doreen Alvares (050 6845019), Jason Dcunha (055 798 2591), Ranjith Shetty (050 645 7317), Lynel Monteiro (055 681 9855), Vinod Shetty (056 321 9221), Kishor Shetty (055 256 0900), Shiva Prasad Shetty (056 485 7101). 

✒️ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ) 0552032097

Ads on article

Advertise in articles 1

advertising articles 2

Advertise under the article