.jpg)
ಒಂದ್ರೂಪಾಯಿಯ ಬೆಲೆ....!
Thursday, December 22, 2022
ಹಸಿವಿನಿಂದ ಸಾಯೋರಿಗೆ ಗೊತ್ತು
ಅನ್ನದ ಬೆಲೆ
ನಿಮಗೇನು ಗೊತ್ತು
ಅ#ತ್ತವರ ಅಕ್ಕಿಯ ಬೆಲೆ
ಚಪ್ಪರದ ನೆರಳಿನಲ್ಲಿ
ಚಿಮುಣದ ಬೆಳಕಿನಲ್ಲಿ
ಹರಕು ಚಾಪೆಯಲ್ಲಿ
ತೆಗ್ಗು ಬಗಡಿಯ ನೆಲದಲ್ಲಿ
ಸ#ತ್ತವರಿಗೆ ಗೊತ್ತು
ಬಡತನದ ಬೆಲೆ
ಸ್ವಾತಂತ್ರ್ಯ ಬಂದು
ನೂರು ವರ್ಷವಲ್ಲ
ಸಾವಿರ ವರ್ಷವಾದರೂ
ಬಂಡವಾಳ ಶಾಹಿಗಳ ಪರ
ಭಾಷಣ ಬಿಗಿಯುವ
ನಿಮಗೇನು ಗೊತ್ತು
ಗುಡಿಸಿಲಿನಲ್ಲಿರುವರ ಬಡತನದ ಬೆಲೆ
ಮಳೆಗೆ ನಿದ್ದೆ ಇಲ್ಲದೆ
ಚಳಿಗೆ ರಗ್ಗಿಲ್ಲದೆ
ಗಾಳಿಗೆ ಬಾಗಿಲಿಲ್ಲದೆ
ವರ್ಷದ ಉದ್ದಕ್ಕೂ ನೆಮ್ಮದಿಯಿಲ್ಲದೆ
ಮೂಲೆಗುಂಪಾದವರಿಗೆ ಗೊತ್ತು
ಬೆರಳಿನಗಲ ಚಿಲ್ಲರೆ ಕಾಸಿನ ಬೆಲೆ
ರಾಮ ರಾಜ್ಯ
ರಾವಣ ರಾಜ್ಯ
ಎಂಬುದರ ನಡುವೆ
ಜಗಳ ಸೃಷ್ಟಿಸಿ
ರಾಜಕೀಯ ಅಧಿಕಾರಕ್ಕಾಗಿ ಒಡೆದಾಡುವ
ನಿಮಗೇನು ಗೊತ್ತು
ದುಡಿಯುವ ಕೈಗಳ
ಒಂದ್ರೂಪಾಯಿಯ ಬೆಲೆ