ಉತ್ತರ ಪ್ರದೇಶದಲ್ಲಿ ನಡೆದ ನ#ಕಲಿ ಎನ್‌#ಕೌಂಟರ್ ಪ್ರಕರಣ; SI ಸೇರಿದಂತೆ 9 ಪೊಲೀಸರಿಗೆ ಜೀ#ವಾವಧಿ ಶಿ#ಕ್ಷೆ

ಉತ್ತರ ಪ್ರದೇಶದಲ್ಲಿ ನಡೆದ ನ#ಕಲಿ ಎನ್‌#ಕೌಂಟರ್ ಪ್ರಕರಣ; SI ಸೇರಿದಂತೆ 9 ಪೊಲೀಸರಿಗೆ ಜೀ#ವಾವಧಿ ಶಿ#ಕ್ಷೆ



ಗಾಜಿಯಾಬಾದ್‌(Headlines Kannada): 16 ವರ್ಷಗಳ ಹಿಂದೆ ನಡೆದ ಉತ್ತರ ಪ್ರದೇಶದ ಇಟಾಹ್‌ ನ#ಕಲಿ ಎನ್‌#ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್‌ ವಿಶೇಷ CBI ನ್ಯಾಯಾಲಯ ಅಂದಿನ ಪೊಲೀಸ್ ಠಾಣಾಧಿಕಾರಿ ಸೇರಿದಂತೆ 9 ಪೊಲೀಸರು ತಪ್ಪಿತಸ್ಥರು ಎಂದು ಮಂಗಳವಾರ ತೀರ್ಪು ನೀಡಿದೆ.

ನಿವೃತ್ತ ಠಾಣಾಧಿಕಾರಿ ಪವನ್ ಸಿಂಗ್, ಪಾಲ್ ಸಿಂಗ್ ತೇನ್ವಾ, ರಾಜೇಂದ್ರ ಪ್ರಸಾದ್, ಸರ್ನಾಮ್ ಸಿಂಗ್ ಹಾಗು ಮೊಹ್ಕಮ್ ಸಿಂಗ್ ಸೇರಿದಂತೆ ಎಲ್ಲಾ 9 ಅಪರಾಧಿಗಳಿಗೆ ಸಿಬಿಐ ಕೋರ್ಟ್ ಜೀ#ವಾವಧಿ ಶಿ#ಕ್ಷೆ ವಿಧಿಸಿ ತೀರ್ಪು ನೀಡಿದೆ.

ಜೊತೆಗೆ ನ್ಯಾಯಾಲಯವು ಪ್ರತಿಯೊಬ್ಬ ಅಪರಾಧಿಗೂ 30,000 ರೂ. ದಂಡ ವಿಧಿಸಿದೆ. ಈ ಪ್ರಕರಣದ ಇತರ ಅಪರಾಧಿಗಳಾದ ಬಲದೇವ್ ಪ್ರಸಾದ್, ಸುಮೇರ್ ಸಿಂಗ್, ಅಜಯ್ ಕುಮಾರ್ ಹಾಗು ಅವಧೇಶ್ ರಾವತ್ ಅವರಿಗೆ ಐಪಿಸಿ ಸೆಕ್ಷನ್ 34ರ ಅಡಿಯಲ್ಲಿ ಉದ್ದೇಶಪೂರ್ವಕವಾಗಿ ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ 5 ವರ್ಷಗಳ ಜೈ#ಲು ಶಿ#ಕ್ಷೆ ಹಗಲು ತಲಾ 11,000 ರೂ. ದಂಡ ವಿಧಿಸಿದೆ.

2006ರ ಆಗಸ್ಟ್ 18ರಂದು ನಡೆದ ಎನ್‌#ಕೌಂಟರ್‌ನಲ್ಲಿ ಉತ್ತರಪ್ರದೇಶದ ಸುನೆಹ್ರಾ ಗ್ರಾಮದ ನಿವಾಸಿ ರಾಜಾರಾಂ ಎಂಬ ಕಾರ್ಪೆಂಟರ್'ನನ್ನು ಹ#ತ್ಯೆ ಮಾಡಲಾಗಿತ್ತು. ಸಿಧ್‌ಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ರಾಜಾರಾಂ ಎಂಬಾತನನ್ನು ಡ#ಕಾಯಿತನಂತೆ ಬಿಂಬಿಸಿ ನ#ಕಲಿ ಎನ್‌#ಕೌಂಟರ್‌ನಲ್ಲಿ ಹ#ತ್ಯೆ ಮಾಡಿದ್ದರು.

ಘಟನೆಯ ಬಳಿಕ ರಾಜಾರಾಮ್ ಅವರ ಪತ್ನಿ ಸಂತೋಷ್ ಕುಮಾರಿ ಅವರು ತನ್ನ ಪತಿ ಎನ್‌#ಕೌಂಟರ್ ಬಗ್ಗೆ ತನಿಖೆ ನಡೆಸಬೇಕೆಂದು ಅಲಹಾಬಾದ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಮನವಿ ಪರಿಗಣಿಸಿದ ಹೈಕೋರ್ಟ್ 2007ರಲ್ಲಿ ಪ್ರಕರಣವನ್ನು CBIಗೆ ವಹಿಸಿತ್ತು.


Ads on article

Advertise in articles 1

advertising articles 2

Advertise under the article