ದೇಶಕ್ಕಾಗಿ ಕಾಂಗ್ರೆಸ್ ಅನೇಕ ಬ#ಲಿ#ದಾನ ಮಾಡಿದೆ, ಬಿಜೆಪಿಯ ಒಂದು ನಾಯಿಯು ದೇಶಕ್ಕಾಗಿ ಪ್ರಾ#ಣ ತ್ಯಾ#ಗ ಮಾಡಿಲ್ಲ: ಖರ್ಗೆ ಹೇಳಿಕೆ ವಿರುದ್ಧ ಸಂಸತ್ತಿನಲ್ಲಿ ತೀವ್ರ ಗದ್ದಲ

ದೇಶಕ್ಕಾಗಿ ಕಾಂಗ್ರೆಸ್ ಅನೇಕ ಬ#ಲಿ#ದಾನ ಮಾಡಿದೆ, ಬಿಜೆಪಿಯ ಒಂದು ನಾಯಿಯು ದೇಶಕ್ಕಾಗಿ ಪ್ರಾ#ಣ ತ್ಯಾ#ಗ ಮಾಡಿಲ್ಲ: ಖರ್ಗೆ ಹೇಳಿಕೆ ವಿರುದ್ಧ ಸಂಸತ್ತಿನಲ್ಲಿ ತೀವ್ರ ಗದ್ದಲನವದೆಹಲಿ(Headlines Kannada): ದೇಶಕ್ಕೆ ಸ್ವಾತಂತ್ರ್ಯ ಸಿಗುವ ವೇಳೆ ಬ್ರಿಟಿಷರ ವಿರುದ್ಧ ಹೋರಾಡಿ ಕಾಂಗ್ರೆಸ್‍ನ ಅನೇಕ ನಾಯಕರು ಬ#ಲಿ#ದಾನ ಮಾಡಿದ್ದಾರೆ. ಆದರೆ, BJPಯ 1 ನಾಯಿಯೂ ದೇಶಕ್ಕಾಗಿ ಪ್ರಾ#ಣ ತ್ಯಾ#ಗ ಮಾಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆ ಮಂಗಳವಾರ ಸಂಸತ್‍ನಲ್ಲಿ ಕೋಲಾಹಲ ಸೃಷ್ಟಿಸಿದ್ದು, ಗದ್ದಲದಿಂದಾಗಿ ಕೆಲ ಕಾಲ ಕಲಾಪ ಮುಂದೂಡಲಾಯಿತು.

ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಯಲ್ಲಿ ಮಾತನಾಡಿದ್ದ ಖರ್ಗೆ ಅವರು, ಕಾಂಗ್ರೆಸ್ ದೇಶಕ್ಕಾಗಿ ಕೆಲಸ ಮಾಡಿದೆ. ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಿದೆ. ನಮ್ಮ ನಾಯಕರು ಪ್ರಾ#ಣ ತ್ಯಾ#ಗ ಮಾಡಿದ್ದಾರೆ. ಆದರೆ BJPಯ ಒಂದು ನಾಯಿ ಕೂಡಾ  ದೇಶಕ್ಕಾಗಿ ಪ್ರಾ#ಣ ತ್ಯಾ#ಗ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ಮಂಗಳವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಖರ್ಗೆಯವರ ಹೇಳಿಕೆಯನ್ನೇ ಹಿಡಿದುಕೊಂಡು ಬಿಜೆಪಿ ಕಲಾಪದಲ್ಲಿ ತೀವ್ರ ಗದ್ದಲ, ಕೋಲಾಹಲವೆಬ್ಬಿಸಿತು. ಈ ಹೇಳಿಕೆಯನ್ನು ಇಂದು ಸಂಸತ್ತಿನಲ್ಲಿ ಉಭಯ ಸದನಗಳಲ್ಲಿ ಪ್ರಸ್ತಾಪಿಸಿದ BJP ನಾಯಕರು ಖರ್ಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.

ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಆಕ್ಷೇಪಾರ್ಹವಾಗಿದ್ದು, ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಆಗ್ರಹಿಸಿದರು.

ಖರ್ಗೆಯವರು ಹೇಳಿಕೆಯನ್ನೇ ಗುರಿ ಮಾಡಿಕೊಂಡು ಬಿಜೆಪಿ ತೀವ್ರ ಗ#ದ್ದಲವನ್ನುಂಟು ಮಾಡಿತು. ಈ ವೇಳೆ ಮಾತನಾಡಿದ ಉಪರಾಷ್ಟ್ರಪತಿ ಹಾಗು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು, ಖರ್ಗೆಯವರು ಸಂಸತ್ತಿನ ಹೊರಗೆ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಿದರು.

ದೇಶದ 135 ಕೋಟಿ ಜನರು ಅಧಿವೇಶನವನ್ನು ನೋಡುತ್ತಿದ್ದಾರೆ. ಯಾರೋ ಹೊರಗೆ ಏನೋ ಹೇಳಿರಬಹುದು... ನೀವು ಮಕ್ಕಳಲ್ಲ ಎಂದು ಜಗದೀಪ್ ಧನಕರ್  ಹೇಳಿದರು.

ಬಿಜೆಪಿ ನಾಯಕರ ವಿರುದ್ಧ ಚಾ#ಟಿ ಬೀಸಿದ ಖರ್ಗೆ 

ಸದನದಲ್ಲಿ ಗ#ದ್ದಲ ಹೆಚ್ಚಾಗುತ್ತಿದ್ದಂತೆ ಕ್ಷಮೆ ಯಾಚನೆಯ ಬಿಜೆಪಿ ಆಗ್ರಹವನ್ನು ಖರ್ಗೆಯವರು ವ್ಯಂಗ್ಯವಾಡಿದರು. ನನ್ನ ಹೇಳೆಯಿಕೆಯನ್ನು ಸದನದಲ್ಲಿ ಪುನರಾವರ್ತಿಸಿದರೆ, BJPಗೆ ತುಂಬಾ ಮುಜುಗರ ಆಗಬಹುದು.  ಏಕೆಂದರೆ ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರೊಂದಿಗೆ ಕ್ಷಮೆಯಾಚಿಸಿದವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕ್ಷಮೆಯಾಚಿಸಲು ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷವು ಯಾವಾಗಲೂ ಭಾರತ್ ಜೋಡೋ ಮೇಲೆ ಕೆಲಸ ಮಾಡಿದೆ. ಇದಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿ ತಮ್ಮ ಪ್ರಾ#ಣ ತ್ಯಾ#ಗ ಮಾಡಿದ್ದಾರೆ. ನೀವು ಏನು ಮಾಡಿದ್ದೀರಿ? ದೇಶಕ್ಕಾಗಿ ಯಾರು ತ್ಯಾ#ಗ ಮಾಡಿದ್ದಾರೆಂದು BJP ನಾಯಕರನ್ನು ಖರ್ಗೆ ಖಾರವಾಗಿ ಪ್ರಶ್ನಿಸಿದರು. 

Ads on article

Advertise in articles 1

advertising articles 2

Advertise under the article