400 ಕೋಟಿ ರೂ. ಗಳಿಕೆ ಕಂಡ 'ಕಾಂತಾರ'! ನಟ ರಿಷಬ್ ಶೆಟ್ಟಿ ಸೇರಿದಂತೆ ನಾಯಕಿ-ನಟರಿಗೆ ಸಿಕ್ಕಿದ ಸಂಭಾವನೆ ಎಷ್ಟು?

400 ಕೋಟಿ ರೂ. ಗಳಿಕೆ ಕಂಡ 'ಕಾಂತಾರ'! ನಟ ರಿಷಬ್ ಶೆಟ್ಟಿ ಸೇರಿದಂತೆ ನಾಯಕಿ-ನಟರಿಗೆ ಸಿಕ್ಕಿದ ಸಂಭಾವನೆ ಎಷ್ಟು?
ಬೆಂಗಳೂರು (Headlines Kannada): ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸುದ್ದಿ ಮಾಡಿರುವ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಒಟ್ಟು 400 ಕೋಟಿ ರೂ. ಬಾಚಿಕೊಂಡಿದೆ. 

ಒಟಿಟಿಯಲ್ಲಿ ಈಗಲೂ ತನ್ನ ಯಶಸ್ಸಿನ ಓಟವನ್ನು ಮುಂದುವರಿಸುತ್ತಿರುವ 'ಕಾಂತಾರ'  ಕನ್ನಡದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ತಂದು ಕೊಟ್ಟಿದ್ದರೆ, ಈ ಚಿತ್ರದ ಒಟ್ಟಾರೆ ಕಲೆಕ್ಷನ್ 400 ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಈಗಾಗಲೇ ಮಾಡಿರುವ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಈ ಚಿತ್ರದಲ್ಲಿ ನಟ ರಿಷಬ್ ಶೆಟ್ಟಿಗೆ ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದು, ಜತೆ ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟ, ಪ್ರಕಾಶ್ ತುಮಿನಾಡು  ಮೊದಲಾದವರು ನಟಿಸಿದ್ದಾರೆ.

ನಟನೆಗಾಗಿ ಪಡೆದುಕೊಂಡ ಸಂಭಾವನೆ...

ಈ ಚಿತ್ರದಲ್ಲಿ ಕಥೆ ಬರೆದು, ನಿರ್ದೇಶನ ಮಾಡುವ ಜೊತೆಗೆ ನಟನಾಗಿ ನಟಿಸಿ ಮಿಂಚಿರುವ ರಿಷಬ್ ಶೆಟ್ಟಿ 4 ಕೋಟಿ ರೂಪಾಯಿ ಪಡೆದಿದ್ದಾರೆನ್ನಲಾಗಿದ್ದು, ಸಪ್ತಮಿ ಗೌಡ ಅವರ ಪಾತ್ರಕ್ಕಾಗಿ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಕಿಶೋರ್  ಅವರಿಗೆ ಈ ಚಿತ್ರಕ್ಕಾಗಿ ಒಂದು ಕೋಟಿ ರೂಪಾಯಿ ನೀಡಲಾಗಿದ್ದು, ಪ್ರಮೋದ್ ಶೆಟ್ಟಿಗೆ  60 ಲಕ್ಷ ರೂಪಾಯಿ ಹಾಗೂ ಅಚ್ಯುತ್ ಕುಮಾರ್ ಅವರು ಈ ಚಿತ್ರಕ್ಕಾಗಿ 40 ಲಕ್ಷ ರೂಪಾಯಿ  ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

Ads on article

Advertise in articles 1

advertising articles 2

Advertise under the article