
ಬ್ರಹ್ಮಾವರ ಸುತ್ತುಮುತ್ತ ಮನೆಕ#ಳ್ಳತನ ಮಾಡುತ್ತಿದ್ದ ಕು#ಖ್ಯಾತ ಕ#ಳ್ಳನ ಬಂಧನ: 7 ಲಕ್ಷ ಮೌಲ್ಯದ ಚಿನ್ನಾಭರಣ, ಸೊತ್ತು ವಶ
ಬ್ರಹ್ಮಾವರ (Headlines Kannada): ಬ್ರಹ್ಮಾವರ ಠಾಣಾ ವ್ಯಾಪ್ತಿಯ ವಿವಿಧ ಕಡೆ ನಡೆದ ಕ#ಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕು#ಖ್ಯಾತ ಕ#ಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕಾಡೂರು ಗ್ರಾಮದ ತಂತ್ರಾಡಿ ನಿವಾಸಿ ವಿಜಯ ಕುಮಾರ್ ಎಂದು ಗುರುತಿಸಲಾಗಿದೆ. ಡಿ.19ರಂದು ಸಂಜೆ ನೀಲಾವರ ಕ್ರಾಸ್ ಬಳಿ ಪೊಲೀಸರು ತಪಾಸಣೆ ಮಾಡುತ್ತಿರುವಾಗ ಈತನನ್ನು ಬಂಧಿಸಿದ್ದಾರೆ. ಈತನು ಬ್ರಹ್ಮಾವರ ಮತ್ತು ಕೋಟ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿವಿಧ ಕ#ಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.
2022ರ ಮಾರ್ಚ್ ಮತ್ತು ಎಪ್ರೀಲ್ ತಿಂಗಳ ಮಧ್ಯಾವಧಿಯಲ್ಲಿ ಕಾಡೂರು ಗ್ರಾಮದ ತಂತ್ರಾಡಿ ಸದಾಶಿವ ಮಹಾಬಲೇಶ್ವರ ರಾವ್ ಹಳೇ ಮನೆಯ ಬಾಗಿಲು ಮುರಿದು 1.40 ಲಕ್ಷ ಮೌಲ್ಯದ ಏಳು ಮೂಟೆ ಕಾಳು ಮೆಣಸುಗಳನ್ನು ಕ#ಳವು ಮಾಡಿರುವ ಪ್ರಕರಣ, ಜುಲೈ ತಿಂಗಳಲ್ಲಿ ರಾತ್ರಿ ನಡೂರು ಗ್ರಾಮದ ನಡೂರು ಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಒಂದು ಇಂಡೇನ್ ಕಂಪೆನಿಯ ಗ್ಯಾಸ್ ಸಿಲಿಂಡರ್ ಕ#ಳವು ಪ್ರಕರಣ, ಅದೇ ತಿಂಗಳಲ್ಲಿ ಯಡ್ತಾಡಿ ಗ್ರಾಮದ ವಾಣಿ ಭಂಡಾರಿ ಅವರ ಮನೆಯಲ್ಲಿ ರಾತ್ರಿ ಮನೆಯ ಬಾಗಿಲು ಮುರಿದು 5.04 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ 15 ಸಾವಿರ ನಗದನ್ನು ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ನವೆಂವರ್ ತಿಂಗಳಿನಲ್ಲಿ ಬಿಲ್ಲಾಡಿ ಸುಜಾತ ಶೆಟ್ಟಿ ಎಂಬವರ ಮನೆ ಕ#ಳ್ಳತನ. ಆರೂರು ಗ್ರಾಮದ ಮೇಲಡ್ಪು ಭಾಸ್ಕರ ಶೆಟ್ಟಿ ಮನೆ ಕ#ಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಆರೋಪಿಯಿಂದ ಒಟ್ಟು 7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.