ಡಿ.ಕೆ.ಶಿವಕುಮಾರ್ ಮನೆಯ ಮೇಲೆ ಪದೇ ಪದೇ ದಾ#ಳಿ ಮಾಡುವ ಬದಲು ಅವರ ಮನೆಯಲ್ಲಿಯೇ  ED, CBI ಕಚೇರಿ ಓಪನ್‌ ಮಾಡಿ: ರಣದೀಪ್ ಸಿಂಗ್ ಸುರ್ಜೇವಾಲಾ

ಡಿ.ಕೆ.ಶಿವಕುಮಾರ್ ಮನೆಯ ಮೇಲೆ ಪದೇ ಪದೇ ದಾ#ಳಿ ಮಾಡುವ ಬದಲು ಅವರ ಮನೆಯಲ್ಲಿಯೇ ED, CBI ಕಚೇರಿ ಓಪನ್‌ ಮಾಡಿ: ರಣದೀಪ್ ಸಿಂಗ್ ಸುರ್ಜೇವಾಲಾಬೆಳಗಾವಿ(Headlines Kannada): ಕಾಂಗ್ರೆಸ್ಡಿ ನಾಯಕ ಡಿ.ಕೆ.ಶಿವ ಕುಮಾರ್ ಮನೆಯ ಮೇಲಿನ CBI ದಾ#ಳಿ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಮೇಲಿಂದ ಮೇಲೆ ದಾ#ಳಿ ನಡೆಸುವ ಬದಲು ಡಿಕೆಶಿ ಅವರ ಮನೆಯಲ್ಲಿ ಒಂದು ಇಡಿ, CBI ಕಚೇರಿ ಆರಂಭಿಸಿ ಎಂದು ಬಿಜೆಪಿ ನಾಯಕರಿಗೆ ಚುಚ್ಚಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್‌ ಮಾಲೀಕತ್ವದ ಶಿಕ್ಷಣ ಸಂಸ್ಥೆ ಮೇಲೆ ನಿನ್ನೆ ನಡೆದ ದಾ#ಳಿಯನ್ನು ಖಂಡಿಸಿದರು. ಡಿಕೆಶಿ ಮನೆಯ ಮೇಲೆ 1 ಡಜನ್ ಬಾರಿ ಪದೇ ಪದೇ ದಾ#ಳಿ ಮಾಡಿದ್ದರೂ ನಿಮಗೆ ಏನೂ ಸಿಕ್ಕಿಲ್ಲ. ಆದರೂ ದಾ#ಳಿ ಮುಂದುವರಿಸುತ್ತಲೇ ಇದ್ದೀರಿ. ನಿಮ್ಮ ಇಂಥ ಬೆದರಿಕೆಗೆ ಕಾಂಗ್ರೆಸ್ ಪಕ್ಷ ಜಗ್ಗಲ್ಲ, ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಡಿಕೆಶಿ ಜೊತೆಗೆ ಇದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಯ ಬೊಮ್ಮಾಯಿ ಸರ್ಕಾರ ಅ#ನೈ#ತಿಕ ಮಾರ್ಗದಿಂದ ಬಂದಿರುವ ಸರ್ಕಾರವಾಗಿದೆ. ಆಡಳಿತ, ನಡವಳಿಕೆಯಿಂದ ಬಿಜೆಪಿಯವರು ಜನರ ದೃಷ್ಟಿಯಲ್ಲಿ ನೆಲಕ್ಕೆ ಬಿದ್ದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ದಿನಕ್ಕೂ ಆಡಳಿತ ನಡೆಸಲು ಬಿಜೆಪಿಗೆ ನೈ#ತಿಕತೆ ಇಲ್ಲ. ಸರಕಾರ ಬಂದಾಗಿನಿಂದ ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರ ಚಡಪಡಿಸುತ್ತಿದೆ ಎಂದು ದೂರಿದರು.

ಬಿಜೆಪಿ ಸರಕಾರ 40 ಪರ್ಸೆಂಟ್‌ನಲ್ಲಿ ಮುಳುಗಿದೆ. ಬೊಮ್ಮಾಯಿ ಸರ್ಕಾರ ತನ್ನ ಎರಡೂ ಕೈಯಿಂದ ಜನರನ್ನೂ ಲೂ#ಟಿ ಮಾಡಿದೆ. ಕರ್ನಾಟಕದಲ್ಲಿ ಭ್ರ#ಷ್ಟಾಚಾರ, ದುರಾಡಳಿತ  ತಾಂಡವವಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

Ads on article

Advertise in articles 1

advertising articles 2

Advertise under the article