ಬ್ರಹ್ಮಾವರ ಪೇತ್ರಿಯಲ್ಲಿ ಹಣಕ್ಕಾಗಿ ಸ್ನೇಹಿತನನ್ನೇ ಚೂ#ರಿ ಇ#ರಿದು‌ ಕೊ#ಲೆ#ಗೈದ ಪ್ರಕರಣ: ಆರೋಪಿ‌ಗೆ ಜೀ#ವಾವಧಿ ಶಿ#ಕ್ಷೆ ಪ್ರಕಟ

ಬ್ರಹ್ಮಾವರ ಪೇತ್ರಿಯಲ್ಲಿ ಹಣಕ್ಕಾಗಿ ಸ್ನೇಹಿತನನ್ನೇ ಚೂ#ರಿ ಇ#ರಿದು‌ ಕೊ#ಲೆ#ಗೈದ ಪ್ರಕರಣ: ಆರೋಪಿ‌ಗೆ ಜೀ#ವಾವಧಿ ಶಿ#ಕ್ಷೆ ಪ್ರಕಟಉಡುಪಿ(Headlines Kannada): ಕಳೆದ 5 ವರ್ಷಗಳ ಹಿಂದೆ ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಪೇತ್ರಿಯ ಯುವಕ ಮಂಡಲದ ಬಳಿ ಹಣಕ್ಕಾಗಿ ಚೂ#ರಿ ಇ#ರಿದು ಸ್ನೇಹಿತನನ್ನೇ ಕೊ#ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪ್ರಶಾಂತ್ ಎಂಬಾತನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀ#ವಾ#ವಧಿ ಶಿ#ಕ್ಷೆ ಹಾಗೂ 60ಸಾವಿರ‌ ರೂ. ದಂಡ ವಿಧಿಸಿ ಇಂದು ತೀರ್ಪು ನೀಡಿದೆ. 

ಚೇರ್ಕಾಡಿ ಗ್ರಾಮದ ಪೇತ್ರಿ ನಿವಾಸಿ 38 ವರ್ಷದ ಪ್ರಕಾಶ್ ನಾಯ್ಕ್ ಕೊ#ಲೆಯಾದ ವ್ಯಕ್ತಿ. ಆತನ ಸ್ನೇಹಿತನಾಗಿದ್ದ ಚೇರ್ಕಾಡಿ ಗ್ರಾಮದ 31 ವರ್ಷದ ಪ್ರಶಾಂತ್ ಎಂಬಾತನೇ ಕೊ#ಲೆ ಆರೋಪಿ. ಆರೋಪಿ ಪ್ರಶಾಂತ್ ನು 2017ರ ಮಾರ್ಚ್ 1ರಂದು ಚೇರ್ಕಾಡಿ ಗ್ರಾಮದ ಪೇತ್ರಿಯ ಯುವಕ ಮಂಡಲದ ಬಳಿ ಹಣ ನೀಡಲಿಲ್ಲ ಎಂಬ ವಿಚಾರಕ್ಕೆ ತನ್ನ ಸ್ನೇಹಿತನಾಗಿದ್ದ ಪ್ರಕಾಶ್ ನನ್ನು ಚೂ#ರಿಯಿಂದ ಇ#ರಿದು ಕೊ#ಲೆ ಮಾಡಿದ್ದನು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಡಿವೈಎಸ್ಪಿ ಎಸ್ ಎ ಕುಮಾರಸ್ವಾಮಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.

34 ಸಾಕ್ಷಿಗಳ ಪೈಕಿ 12 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಅದರಲ್ಲಿ ಪ್ರತ್ಯಕ್ಷದರ್ಶಿಗಳ ಸಾಕ್ಷಿ ಅಭಿಯೋಜನೆಗೆ ಪೂರಕವಾಗಿತ್ತು. ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯಪಟ್ಟ ನ್ಯಾಯಾಧೀಶ ಶಾಂತವೀರಪ್ಪ, ಜೀ#ವಾವಧಿ ಶಿ#ಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಪ್ರಾಸಿಕ್ಯೂಶನ್‌ ಪರವಾಗಿ ಹಿರಿಯ ಸರಕಾರಿ ಅಭಿಯೋಜಕಿ ಶಾಂತಿ‌ ಬಾಯಿ ವಾದ ಮಂಡಿಸಿದ್ದರು.

Ads on article

Advertise in articles 1

advertising articles 2

Advertise under the article