ಪೆರ್ಣಂಕಿಲದಲ್ಲಿ ಲಂ#ಚ ಸ್ವೀಕರಿಸುವಾಗ ರೆಡ್ ಹ್ಯಾಂ#ಡಾಗಿ ಸಿ#ಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ!

ಪೆರ್ಣಂಕಿಲದಲ್ಲಿ ಲಂ#ಚ ಸ್ವೀಕರಿಸುವಾಗ ರೆಡ್ ಹ್ಯಾಂ#ಡಾಗಿ ಸಿ#ಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ!

ಮಣಿಪಾಲ (Headlines Kannada): ಜಮೀನು ಸಕ್ರಮ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ ಲಂ#ಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಾಧಿಕಾರಿಯೋರ್ವ ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡ್ ಆಗಿ ಸಿ#ಕ್ಕಿಬಿದ್ದ ಘಟನೆ ಪೆರ್ಣಂಕಿಲ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಪೆರ್ಣಂಕಿಲ ಗ್ರಾಮದ ಲೆಕ್ಕಾಧಿಕಾರಿ ಹರೀಶ್ ಎನ್.ಪಿ. ಬಂಧಿತ ಆ#ರೋಪಿ. ಪೆರ್ಣಂಕಿಲದ ನಿವಾಸಿಯೊಬ್ಬರು ಪೆರ್ಣಂಕಿಲ ಗ್ರಾಮದ ಸರ್ವೆ ನಂ. 171/1ರಲ್ಲಿ 1.15 ಎಕರೆ ಜಮೀನಿನ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಜಮೀನು ಸಕ್ರಮ ಮಾಡಿಕೊಡಲು 10 ಸಾವಿರ ರೂ.ಗೆ ಬೇಡಿಕೆ ಇರಿಸಿದ್ದರು. 

ಈ ಬಗ್ಗೆ ಜಾಗದ ಮಾಲೀಕ ಲೋಕಾಯುಕ್ತ ಪೊಲೀಸರಿಗೆ ದೂ#ರು ನೀಡಿದ್ದನು. ಅದರಂತೆ ಉಡುಪಿ ಲೋಕಾಯುಕ್ತ ಠಾಣೆಯ ಪ್ರಭಾರ ಉಪಾಧೀಕ್ಷಕ ಜಯರಾಮ ಡಿ. ಗೌಡ ಅವರ ನೇತೃತ್ವದಲ್ಲಿ ಉಪಾಧೀಕ್ಷೆ ಕಲಾವತಿ ಕೆ. ಹಾಗೂ ಸಿಬ್ಬಂದಿ ಇಂದು ದಿಢೀರ್ ಕಾ#ರ್ಯಾಚರಣೆ ನಡೆಸಿದ್ದರು. 

ಈ ವೇಳೆ ಆರೋಪಿ ಹರೀಶ್ 10 ಸಾವಿರ ರೂ.ತೆಗೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದನು. ಲಂ#ಚದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಗಣೇಶ್ ಕೆ. ತಿಳಿಸಿದ್ದಾಾರೆ.

Ads on article

Advertise in articles 1

advertising articles 2

Advertise under the article