
ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಎನ್.ಎಚ್.ಅಬ್ದುಲ್ ಹಮೀದ್ ಆಯ್ಕೆ
Saturday, December 31, 2022
ಕಾರ್ಕಳ (Headlines Kannada): ಇಲ್ಲಿನ ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿಯ ಹೊಸ ಕಮಿಟಿ ರಚನೆಯಾಗಿದೆ. ಮಸೀದಿಯ ಅಧ್ಯಕ್ಷರಾಗಿ ಎನ್.ಎಚ್.ಅಬ್ದುಲ್ ಹಮೀದ್, ಉಪಾಧ್ಯಕ್ಷರಾಗಿ ಅಬ್ದುಲ್ ಜಲೀಲ್ ನಿಟ್ಟೆ, ಕಾರ್ಯದರ್ಶಿಯಾಗಿ ಅಹಮದ್ ಬಾವ ಟೈಲರ್, ಕೋಶಾಧಿಕಾರಿಯಾಗಿ ಅಹಮದ್ ಹುಸೈನ್ ಬೋರ್ಗಲ್ಗುಡ್ಡೆ ಆಯ್ಕೆಯಾಗಿದ್ದಾರೆ. ಕಮಿಟಿಯ ಸದಸ್ಯರಾಗಿ ಮೊಯಿದಿನ್ ಮಹಮದಾಲಿ, ಎನ್.ಎಂ.ಇಸ್ಮಾಯಿಲ್, ಉಮರುಲ್ ಫಾರೂಕ್, ಇಬ್ರಾಹಿಂ ಫಕೀರ್, ಇಬ್ರಾಹಿಂ ಅಹಮದ್ ಗುಲಾಂ, ಅಬ್ದುಲ್ ಜಬ್ಬಾರ್, ರಮ್ಲಾನ್ ಮಹಮದಾಲಿ ಆಯ್ಕೆಯಾಗಿದ್ದಾರೆ.