'ಬಿಗ್ ಬಾಸ್-9' ಕಿರೀಟ ಗೆದ್ದ ಕರಾವಳಿ ಹುಡುಗ ರೂಪೇಶ್ ಶೆಟ್ಟಿ; ರಾಕೇಶ್ ಅಡಿಗಗೆ ನಿರಾಸೆ

'ಬಿಗ್ ಬಾಸ್-9' ಕಿರೀಟ ಗೆದ್ದ ಕರಾವಳಿ ಹುಡುಗ ರೂಪೇಶ್ ಶೆಟ್ಟಿ; ರಾಕೇಶ್ ಅಡಿಗಗೆ ನಿರಾಸೆ

   

ಬೆಂಗಳೂರು(Headlines Kannada): ಇಂದು ನಡೆದ ಬಿಗ್ ಬಾಸ್ ಸೀಸನ್ 9ರ ಫಿನಾಲೆಯಲ್ಲಿ ಕರಾವಳಿ ಹುಡುಗ, ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ.

ಫಿನಾಲೆಯಲ್ಲಿದ್ದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ,  ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಹಾಗು ದೀಪಿಕಾ ದಾಸ್ ಪೈಕಿ, ಮೊದಲು ರಾಜಣ್ಣ ಔಟಾದರೆ, ನಂತರ ದೀಪಿಕಾ ದಾಸ್ ಮನೆಯಿಂದ ಹೊರನಡೆದರು. ನಂತರ ನಡೆದ ಫಿನಾಲೆಗೆ ರೂಪೇಶ್ ಶೆಟ್ಟಿ ಹಾಗು ರಾಕೇಶ್ ಅಡಿಗರನ್ನು ವೇದಿಕೆಗೆ ನಟ ಕಿಚ್ಚ ಸುದೀಪ್ ಕರೆದುಕೊಂಡು ಬಂದು ಈ ಬಾರಿಯ ವಿನ್ನರ್  ರೂಪೇಶ್ ಶೆಟ್ಟಿ ಎಂದು ಘೋಷಣೆ ಮಾಡಿದ್ದಾರೆ.

ರೂಪೇಶ್ ಶೆಟ್ಟಿ ಮೊದಲಿಗೆ 'ನಮ್ಮ ಟಿವಿ' ಚಾನೆಲ್ ನಲ್ಲಿ ನಿರೂಪಕನಾಗಿ ಕಾಣಿಸಿಕೊಂಡು ಜನಪ್ರಿಯರಾಗಿದ್ದರು.  ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕಿ, ಗಾಯಕ ಮತ್ತು ಮಾಡೆಲ್ ಆಗಿರುವ ರೂಪೇಶ್ ಶೆಟ್ಟಿ, ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ರೂಪೇಶ್ ಕೇರಳದ ಕಾಸರಗೋಡಿನ ಉಪ್ಪಳದವರಾಗಿದ್ದರೂ, ಓದಿದ್ದು, ಬೆಳೆದದ್ದು ಮಂಗಳೂರಿನಲ್ಲಿ.

'ದಿಬ್ಬಣ' ಎಂಬ ತುಳು ಚಿತ್ರದಲ್ಲಿ ಕಿರು ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ರೂಪೇಶ್, ತಮಿಳಿನ ಅತ್ಯಂತ ಪ್ರಸಿದ್ಧಿ ಹೊಂದಿರುವ ಕೊಲವೆರಿ ಡಿ ಎಂಬ ಹಾಡನ್ನು ಪುನರ್ ನಿರ್ದೇಶಿಸಿ ಹಾಡಿದ್ದಾರೆ.  

'ಗಿರಿಗಿಟ್' ಎನ್ನುವ ತುಳುಚಿತ್ರದ ಮೂಲಕ ತುಳುನಾಡಿನ ಪ್ರೇಕ್ಷಕರ ಮನಗೆದ್ದ ನಟ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. OTT ಮೂಲಕ ಕಾಲಿಟ್ಟ ರೂಪೇಶ್ ಶೆಟ್ಟಿ, ಟಿವಿ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿಯಾಗಿ ಪೈಪೋಟಿ ನೀಡಿದ್ದರು. OTT ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ.

ರಾಕೇಶ್ ಅಡಿಗ ಟಫ್ ಫೈಟ್ ಕೊಟ್ಟು, ರನ್ನರ್ ಅಪ್ ಆಗಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ‘ಬಿಗ್ ಬಾಸ್​​ ಕನ್ನಡ’ ವಿಜೇತರಾಗಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿ ದಕ್ಕಿದೆ. ಈ ಬಹುಮಾನದ ಮೊತ್ತಕ್ಕೆ ಶೇ.30 ಅವರಿಗೆ ಟ್ಯಾಕ್ಸ್  ಬೀಳಲಿದೆ. 60 ಲಕ್ಷ ರೂಪಾಯಿಯಲ್ಲಿ ಸುಮಾರು 18 ಲಕ್ಷ ರೂ. ಕಡಿತ ಆಗಲಿದೆ. ಅಂದರೆ BIGGBOSS ಗೆದ್ದ ಸ್ಪರ್ಧಿಗೆ 42 ಲಕ್ಷ ರೂಪಾಯಿ ಸಿಗಲಿದೆ. 10 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಹಣ ಗೆದ್ದ ಸ್ಪರ್ಧಿಗೆ ಮಾತ್ರ ಈ ತೆರಿಗೆ ಅನ್ವಯ ಆಗಲಿದೆ. 

Ads on article

Advertise in articles 1

advertising articles 2

Advertise under the article