ಬೆಳ್ತಂಗಡಿ ಬಳಿ ನಡೆದ ಕಾರು-ಬಸ್ ಅ#ಪಘಾತ; ಸಾಮಾಜಿಕ-ಧಾರ್ಮಿಕ ಮುಖಂಡ ನೌಶಾದ್ ಹಾಜಿ ಸೂರಲ್ಪಾಡಿ ಸೇರಿದಂತೆ ಇಬ್ಬರು ದು#ರ್ಮರಣ

ಬೆಳ್ತಂಗಡಿ ಬಳಿ ನಡೆದ ಕಾರು-ಬಸ್ ಅ#ಪಘಾತ; ಸಾಮಾಜಿಕ-ಧಾರ್ಮಿಕ ಮುಖಂಡ ನೌಶಾದ್ ಹಾಜಿ ಸೂರಲ್ಪಾಡಿ ಸೇರಿದಂತೆ ಇಬ್ಬರು ದು#ರ್ಮರಣ

ಬೆಳ್ತಂಗಡಿ(Headlines Kannada): ಹಲವಾರು ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದ ನೌಶಾದ್ ಹಾಜಿ ಸೂರಲ್ಪಾಡಿ(44) ರವಿವಾರ ನಡೆದ ಅ#ಪಘಾತವೊಂದರಲ್ಲಿ ಸಾ#ವನ್ನಪ್ಪಿದ್ದು, ಇವರ ಜೊತೆ ಇವರ ಕಾರು ಚಾಲಕ ಉಳಾಯಿಬೆಟ್ಟು ನಿವಾಸಿ ಮುಷರಫ್ ಕೂಡ ಬ#ಲಿಯಾಗಿದ್ದಾನೆ. 

ಈ ದು#ರ್ಘಟನೆ ನಡೆದಿರುವುದು ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ ಸಮೀಪ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನೌಶಾದ್ ಹಾಜಿ ಸೂರಲ್ಪಾಡಿ ಹಾಗು ಅವರ ಚಾಲಕ ಮುಷರಫ್ ಅವರಿದ್ದ ಕಾರಿಗೆ ಬಸ್ಸೊಂದು ಮುಖಾಮುಖಿ ಡಿ#ಕ್ಕಿ ಹೊಡೆದಿದೆ. ಈ ವೇಳೆ ಇಬ್ಬರೂ ಸ್ಥ#ಳದಲ್ಲಿಯೇ ಕೊ#ನೆಯುಸಿರೆಳೆದಿದ್ದಾರೆ.




ಮೂಲತಃ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿಯಾಗಿದ್ದ ನೌಶಾದ್ ಹಾಜಿ,  ಸೂರಲ್ಪಾಡಿಯವರು ಪ್ರಸಕ್ತ ಗಂಜಿಮಠದ ಸೂರಲ್ಪಾಡಿಯಲ್ಲಿ ನೆಲೆಸಿದ್ದರು. ಎಲ್ಲರಿಗೆ ಚಿರಪರಿಚಿತರಾಗಿದ್ದು, ನೂರಕ್ಕೂ ಮಿಕ್ಕಿ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಉನ್ನತ ಸ್ಥಾನದಲ್ಲಿದ್ದ ಅವರು, ಮದ್ರಸ ಮ್ಯಾನೇಜ್ಮೆಂಟ್'ನ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದರು.

ನೇಶನಲ್ ಮಿಷನ್ ಇದರ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ, ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ, ಇವರ ನೇತೃತ್ವದಲ್ಲಿ 500ಕ್ಕೂ ಅಧಿಕ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹವನ್ನು ನೆರವೇರಿದ್ದರು. ನಂಡೆ ಪೆಂಙಳ್ ಅಭಿಯಾನದ ಸ್ಥಾಪಕಾಧ್ಯಕ್ಷರಾಗಿದ್ದರು. ಬೆಳ್ತಂಗಡಿಯ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಕೋಶಾಧಿಕಾರಿಯಾಗಿ, ಮೂಡುಬಿದಿರೆ ಕಾಶಿಪಟ್ಣದ ದಾರುನ್ನೂರ್ ಎಜ್ಯುಕೇಶನ್ ಸೆಂಟರ್ ಕಾರ್ಯದರ್ಶಿಯಾಗಿ, ಗುರುಪುರ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ವಿವಿಧ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು.

ಮೃ#ತ ನೌಶಾದ್ ಹಾಜಿ ಅವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.


Ads on article

Advertise in articles 1

advertising articles 2

Advertise under the article