ಗುಜರಾತಿನ 'ಅಮುಲ್' ಜೊತೆ ಕರ್ನಾಟಕದ 'ಕೆಎಂಎಫ್-ನಂದಿನಿ' ವಿಲೀನ: ಅಮಿತ್ ಶಾ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು..?

ಗುಜರಾತಿನ 'ಅಮುಲ್' ಜೊತೆ ಕರ್ನಾಟಕದ 'ಕೆಎಂಎಫ್-ನಂದಿನಿ' ವಿಲೀನ: ಅಮಿತ್ ಶಾ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು..?



ಬೆಂಗಳೂರು(Headlines Kannada): ಕರ್ನಾಟಕ ಹಾಲು ಮಹಾಮಂಡಳ ಒಕ್ಕೂಟ (ಕೆಎಂಎಫ್‌- ನಂದಿನಿ) ಹಾಗು ಗುಜರಾತಿನ 'ಅಮುಲ್‌' ಅನ್ನು ವಿಲೀನಗೊಳಿಸುವ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಮಿತ್ ಶಾ ಸಲಹೆ KMF ಅವಲಂಬಿಸಿರುವ 25 ಲಕ್ಷ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದಲ್ಲಿ ಹಾಲು ಉತ್ಪಾದಕರು ಸುಮಾರು 20,000 ಕೋಟಿ ರೂಪಾಯಿ ವಹಿವಾಟು ಮಾಡುತ್ತಿದ್ದು, ಗುಜರಾತ್‌ನ ಕಾರ್ಪೊರೇಟ್‌ಗಳು ಈಗ ಅದರ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಹಾಲಿನ ವ್ಯಾಪಾರದಿಂದಾಗಿ ಲಕ್ಷಾಂತರ ಕುಟುಂಬಗಳ ಮನೆಯಲ್ಲಿ ದೀಪ ಬೆಳಗುತ್ತಿದೆ. ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚಿನಿಂದ ಹಿಡಿದು, ಅಕ್ಕಿ, ಬೇಳೆ, ಬಟ್ಟೆ-ಬರೆ ಮುಂತಾದವುಗಳೆಲ್ಲ ರೈತರಿಗೆ ಈ ಹಾಲಿನಿಂದಲೇ ಬರಬೇಕು. ಇಂತಹ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್‌ ಕಾರ್ಪೊರೇಟ್‌ ಕುಳಗಳ ಕಣ್ಣು ಬಿದ್ದಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಗುಜರಾತ್‌ ಕಾರ್ಪೊರೇಟ್‌ ಕುಳಗಳ ಕಣ್ಣು ಬಿದ್ದ ಕಡೆ, ಅವರು ಕಾಲು ಇಟ್ಟ ಕಡೆ ಎಲ್ಲ ಸ#ರ್ವನಾಶವಾಗುತ್ತದೆ. ಅವರಿಗಾಗಿಯೇ ಹಗಲಿರುಳು ದುಡಿಯುತ್ತಿರುವ ಅಮಿತ್‌ ಶಾ, ಪ್ರಧಾನಿ ಮೋದಿ ಮುಂತಾದವರೆಲ್ಲ ಸುಳ್ಳುಗಳ ಮುಳ್ಳಿನ ಟೋಪಿಯನ್ನು ಸಿದ್ಧಪಡಿಸಿಕೊಂಡು ಕನ್ನಡಿಗರ ತಲೆಗೆ ತೊಡಿಸಲು ಮುಂದಾಗಿದ್ದಾರೆ. BJPಯವರು ಸಿದ್ಧಪಡಿಸಿಕೊಂಡಿರುವ ವಿಷದ ಟೋಪಿಯಲ್ಲಿ ಹಿಂದೂ-ಮುಸ್ಲಿಂ ದ್ವೇ#ಷ, ಭ್ರಷ್ಟಾಚಾರ, ಕುಟುಂಬ ರಾಜಕಾರಣವೆಂಬ ಮುಳ್ಳುಗಳೂ ಇರಲಿದ್ದು, ಜನರು ಎಚ್ಚರದಿಂದಿರಬೇಕು ಎಂದಿರುವ ಸಿದ್ದರಾಮಯ್ಯ,  ನಮ್ಮ ರೈತರ ಏಳಿಗೆಯಾಗ ಬೇಕಿದ್ದರೆ ಅವರ ಹಾಲಿಗೆ ಬೆಲೆ ಬೇಕು. ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತಾಗಬೇಕು,  ಅವರು ಬೆಳೆದಿದ್ದನ್ನು ಕೊಂಡುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

KMF ವಿಲೀನದ ಕುರಿತು ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ... 

ಈ ನಡುವೆ ಅಮುಲ್ ಜೊತೆಗೆ KMF ವಿಲೀನದ ಕುರಿತು ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡಿದ್ದು, ಕೇಂದ್ರದ ಈ ಸಲಹೆ ವಿರುದ್ಧ ಕಿಡಿಕಾರುತ್ತಿದ್ದಾರೆ.

ಎರಡೂ ಬ್ರಾಂಡ್ ಗಳ ಗುಣಮಟ್ಟ, ಬೆಲೆ ಮತ್ತು ರುಚಿಯನ್ನು ಹೋಲಿಕೆ ಮಾಡಿದ್ದು, ಈ ವಿಚಾರದಲ್ಲಿ KMF ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ.

KMF ಕರ್ನಾಟಕದ ಹೆಮ್ಮೆ ಎಂದು ಕರೆದಿರುವ ನೆಟ್ಟಿಗರು, ಕೆಎಂಎಫ್ ಕರ್ನಾಟಕದಲ್ಲಿ ಅಗ್ರ ಮತ್ತು ಲಾಭದಾಯಕ ಬ್ರ್ಯಾಂಡ್ ಎಂದು ಕೊಂಡಾಡಿದ್ದಾರೆ.

Ads on article

Advertise in articles 1

advertising articles 2

Advertise under the article