
ಲೈಂ#ಗಿಕ ಕಿ#ರುಕುಳ ಪ್ರಕರಣ: ಹರಿಯಾಣದ ಸಚಿವ ಸಂದೀಪ್ ಸಿಂಗ್ ರಾಜೀನಾಮೆ
Sunday, January 1, 2023
ಚಂಡೀಗಢ(Headlines Kannada): ಲೈಂ#ಗಿಕ ಕಿ#ರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಸಚಿವ ಸಂದೀಪ್ ಸಿಂಗ್ ತಮ್ಮ ಖಾತೆಗೆ ರಾಜೀನಾಮೆ ನೀಡಿದ್ದಾರೆ.
ತಮ್ಮ ವಿರುದ್ಧ ಲೈಂ#ಗಿಕ ಕಿ#ರುಕುಳ ಪ್ರಕರಣ ದಾಖಲಾಗಿರುವ ಹಿನ್ನೆಲೆಯ್ಲಲಿ ಹರಿಯಾಣದ ಕ್ರೀಡಾ ಖಾತೆ ಸಚಿವ ಸಂದೀಪ್ ಸಿಂಗ್, ನೈತಿಕ ಆಧಾರದ ಮೇಲೆ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಹರಿಯಾಣದ ಮಹಿಳಾ ಜೂನಿಯರ್ ಅಥ್ಲೆಟಿಕ್ಸ್ ತರಬೇತುದಾರರ ದೂರಿನ ಮೇರೆಗೆ ಚಂಡೀಗಢ ಪೊಲೀಸರು ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ 1 ದಿನದ ನಂತರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಭಾರತೀಯ ಹಾಕಿ ತಂಡದ ಮಾಜಿ ನಾಯಕರೂ ಆಗಿರುವ 36 ವರ್ಷದ ಸಂದೀಪ್ ಸಿಂಗ್ ವಿರುದ್ಧ ಅ#ಕ್ರಮ ಬಂ#ಧನ ಹಾಗು ಕ್ರಿ#ಮಿನಲ್ ಬೆ#ದರಿಕೆಯ ಆರೋಪವನ್ನೂ ಹೊರಿಸಲಾಗಿದೆ.