
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗೆ ಮತ ಹಾಕದಿದ್ದರೆ ನಿಮ್ಮ ಕೆಲಸ ಮಾಡಿಕೊಡಲ್ಲ: ಮುಸ್ಲಿಮರ ಬಡಾವಣೆಗೆ ತೆರಳಿ ಎಚ್ಚರಿಕೆ ನೀಡಿದ ಪ್ರೀತಂಗೌಡ
ಹಾಸನ(Headlines Kannada): ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಮತದಾರರಿಗೆ ಬೆ#ದರಿಕೆ ಹಾಕಿರುವ ವಿಡಿಯೋವೊಂದು ವೈರಲ್ ಆಗಿದ್ದು, ನಗರದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರೋ ಬಡಾವಣೆಗೆ ತೆರಳಿ 'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗೆ ಮತ ಹಾಕದಿದ್ದರೆ ನಿಮ್ಮ ಕೆಲಸ ಏನೂ ಮಾಡಿಕೊಡಲ್ಲ' ಎಂದು ಮುಸ್ಲಿಮರಿಗೆ ಬೆ#ದರಿಕೆ ಹಾಕಿದ್ದಾರೆ.
ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿರುವ ಪ್ರೀತಂಗೌಡ, ಹಿಂದೆ MLA , ಲೋಕಸಭೆ, ನಗರಸಭೆ, ಚುನಾವಣೆಯಲ್ಲಿ ನಮಗೆ ಮತ ಹಾಕಿಲ್ಲ. ಬಾಯಲ್ಲಿ ಅಣ್ಣಾ ಅಂತ ಹೇಳಿ ಕೊನೆಗೆ ನಾವು ಬಿಜೆಪಿಗೆ ವೋಟು ಹಾಕಲ್ಲ ಅಂತ ಹೇಳಿದರೇ ಕೆಲಸ ಮಾಡಿದವರಿಗೆ ಉರಿ ಹತ್ತುತ್ತೆ ಎಂದು ಹೇಳಿದ್ದಾರೆ.
ನಮ್ಮ ಮುಸಲ್ಮಾನರನ್ನು ಸಹೋದರರ ರೀತಿಯಲ್ಲಿ ನಾನು ಪ್ರಮಾಣಿಕವಾಗಿ ಪ್ರೀತಿಯಿಂದ ಕಾಣುತ್ತಿದ್ದೇನೆ. ಆದರೆ ನಾನು ಕೆಲಸ ಮಾಡಿದ ಸಂದರ್ಭದಲ್ಲಿ ನೀವೇನಾದರೂ ಸಹಾಯ ಮಾಡಿಲ್ಲಾ ಅಂತಾದರೆ ಇವರಿಗೆ ಎಷ್ಟು ಕೆಲಸ ಮಾಡಿದರು ಅಷ್ಟೇ ನಮ್ಮ ಹಣೆಬರಹ ಬದಲಾಗಲ್ಲ, ಅಂತ ಹೇಳಿ ಈ ಕಡೆ ತಿರುಗಿ ನೋಡಬಾರದು ಅನ್ನುವ ತೀರ್ಮಾನಕ್ಕೆ ನಾನು ಬರ್ತಿನಿ ಎಂದರು.
ಆ ತೀರ್ಮಾನಕ್ಕೆ ನಾನು ಬರದೆ ಇರುವ ರೀತಿ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. 3 ಸಾರಿ ನನಗೆ ಕೈಕೊಟ್ಟಿದೀರಿ, ನನ್ನ MLA ಚುನಾವಣೆಯಲ್ಲಿ ವೋಟು ಹಾಕಿಲ್ಲ, ಕೌನ್ಸಿಲರ್ ಚುನಾವಣೆಯಲ್ಲಿ ವೋಟು ಹಾಕಿಲ್ಲ. MP ಚುನಾವಣೆಯಲ್ಲಿ ವೋಟು ಹಾಕಿಲ್ಲ. ಈಗ ಮತ್ತೆ 5 ವರ್ಷ ಆದ್ಮೇಲೆ ಚುನಾವಣೆ ಬರುತ್ತೆ. ಆ ಸಂದರ್ಭದಲ್ಲಿ ನೀವೇನಾದರು ಕೈಕೊಟ್ಟರೇ ನಾನು ಕೈ, ಕಾಲು ಎರಡನ್ನು ಕೊಡುತ್ತೇನೆ. ಇಷ್ಟಾದರೂ ವೋಟ್ ಹಾಕಲಿಲ್ಲ ಅಂದರೇ ನಾನು ಯಾವ ಕೆಲಸವನ್ನು ಮಾಡಿಕೊಡೋದಿಲ್ಲ ನೇರವಾಗಿ ಹೇಳುತ್ತಿದ್ದೇನೆ ಎಂದು ಪ್ರೀತಂಗೌಡ ಹೇಳಿದ್ದಾರೆ.