ಆಡಳಿತಾರೂಢ ಬಿಜೆಪಿಯ ವಿಕೆಟ್'ಗಳು ಪತನದತ್ತ...! 'ಕೈ'ಯತ್ತ ಮುಖ ಮಾಡಿದ ಪುಟ್ಟಣ್ಣ
Thursday, December 15, 2022
ಬೆಂಗಳೂರು(Headlines Kannada): ಈ ಬಾರಿಯ ವಿಧಾನಸಭಾ ಚುನಾವಣಾ ಹತ್ತಿರ ಆಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯ ಒಂದೊಂದೇ ವಿಕೆಟ್'ಗಳು ಪತನ ಆಗುವತ್ತ ಸಾಗಿದೆ. ಬಿಜೆಪಿಯ ನಡವಳಿಕೆಯಿಂದ ಬೇಸತ್ತ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ದು ಹೇಳಲಾಗಿದೆ.
ಬಿಜೆಪಿಗೆ ಗುಡ್ಪು ಬೈ ಹೇಳಲು ಮುಂದಾಗುತ್ತಿದ್ದಂತೆ ಪಕ್ಷವನ್ನು ಸೇರುವಂತೆ ಕಾಂಗ್ರೆಸ್ ನಿಂದ ಆಹ್ವಾನ ಬಂದಿದೆ ಎಂದು ಅವರ ಆಪ್ತ ವಲಯವು ತಿಳಿಸಿದೆ.
‘ಪಕ್ಷವನ್ನು ಅಧಿಕಾರಕ್ಕೆ ತರಲು ತಮ್ಮನ್ನು ಹಾಗೂ ಸಿ.ಪಿ.ಯೋಗೇಶ್ವರ ಅವರನ್ನು ಚೆನ್ನಾಗಿ ಬಳಸಿಕೊಂಡ ಬಿಜೆಪಿ, ಬಳಿಕ ತಮ್ಮನ್ನು ಮರೆತದ್ದೂ ಅಲ್ಲದೇ ನಿರ್ಲಕ್ಷಿಸುತ್ತಿದ್ದಾರೆ' ಎಂದು ಪುಟ್ಟಣ್ಣ ಅವರು ತಮ್ಮ ಆಪ್ತರ ಬಳಿ ಆಕ್ರೋಶ ತೋಡಿಕೊಂಡಿದ್ದಾರೆ.
ಈ ಹುಣ್ಣೇಲೆಯಲ್ಲಿ ಪುಟ್ಟಣ್ಣ ಅವರು ಸದ್ಯಕ್ಕೆ ತಟಸ್ಥರಾಗಿ ಉಳಿದಿದ್ದಾರೆ. ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದರಿಂದ, ಮುಂದೆ ಕಾಂಗ್ರೆಸ್ ಸೇರುವ ಬಗ್ಗೆ ಒಲವು ಹೊಂದಿದ್ದಾರೆ’ ಎಂದು ಅವರ ಆಪ್ತವಲಯ ತಿಳಿಸಿದೆ.
ಈ ಹಿಂದೆ ಪುಟ್ಟಣ್ಣ ಅವರು 2019ರಲ್ಲಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದು, ಪರಿಷತ್ತಿಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈಗ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಾಂಗ್ರೆಸ್ ಸೇರಲು ತೀರ್ಮಾನಿಸಿದ ಬೆನ್ನಲ್ಲೇ ಪುಟ್ಟಣ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.