ನಾನು ಬಿಜೆಪಿ ಸೇರುವುದಕ್ಕೆ ವಿಜಯೇಂದ್ರ ನನಗೆ ದುಡ್ಡು ಕೊಡಲು ಬಂದಿದ್ದ; ಬಿಜೆಪಿ ಸೇರಿದ ಮೇಲೆ ಯಾರು ನನ್ನ ಸಹಾಯಕ್ಕೆ ಬಂದಿಲ್ಲ: ವಿಶ್ವನಾಥ್‌  ಹೊಸ ಬಾಂಬ್

ನಾನು ಬಿಜೆಪಿ ಸೇರುವುದಕ್ಕೆ ವಿಜಯೇಂದ್ರ ನನಗೆ ದುಡ್ಡು ಕೊಡಲು ಬಂದಿದ್ದ; ಬಿಜೆಪಿ ಸೇರಿದ ಮೇಲೆ ಯಾರು ನನ್ನ ಸಹಾಯಕ್ಕೆ ಬಂದಿಲ್ಲ: ವಿಶ್ವನಾಥ್‌ ಹೊಸ ಬಾಂಬ್ಮೈಸೂರು(Headlines Kannada): ನಾನು ಬಿಜೆಪಿ ಸೇರುವುದಕ್ಕಾಗಿ ಯಡಿಯೂರಪ್ಪ ಅವರ  ಪುತ್ರ ಬಿ.ವೈ.ವಿಜಯೇಂದ್ರ ನನಗೆ ದುಡ್ಡು ಕೊಡಲು ಬಂದಿದ್ದು, ಅವರ ಅಪಾರ್ಟ್‌ಮೆಂಟ್‌ನಲ್ಲೇ ಮಾತುಕತೆ ನಡೆದಿತ್ತು ಎಂದು ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್‌  ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಹೊರಬರಲಿರುವ ನಾನು ಬರೆದ  ‘ಬಾಂಬೆ ಡೇಸ್’ ಪುಸ್ತಕದ ಮೊದಲ ಅಧ್ಯಾಯದಲ್ಲೇ ಇದೆಲ್ಲ ಅಂಶಗಳೂ ಇರಲಿವೆ. ಈ ಕುರಿತ ಎಲ್ಲ ವಿವರಗಳೆಲ್ಲ ಅದರಲ್ಲೇ ಇರಲಿವೆ ಎಂದು ಹೇಳಿದ್ದಾರೆ.  

ಕಾಂಗ್ರೆಸಿನಲ್ಲಿದ್ದ ನನ್ನನ್ನು ಬಿಜೆಪಿ ಹೆಬ್ಬಾಗಿಲಿಗೆ ಕರೆದುಕೊಂಡು ಬಂದು ಕಡಿದವರೇ ಸಂಸದ ವಿ.ಶ್ರೀನಿವಾಸ ಪ್ರಸಾದ್. ವಿಜಯೇಂದ್ರನ ಮನೆಯಲ್ಲಿ ಈ ಬಗ್ಗೆ ಮಾತುಕತೆ ನಡೆದಿತ್ತು. ಮಾತುಕತೆಯ ವೇಳೆ ಬಿ.ಎಸ್.ಯಡಿಯೂರಪ್ಪ, ರಮೇಶ ಜಾರಕಿಹೊಳಿ, ವಿಜಯೇಂದ್ರ ಇದ್ದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ನೀವು ಬಿಜೆಪಿಗೆ ಬರಬೇಕು ಎಂದು ನನ್ನನ್ನು ಒತ್ತಾಯಿಸಿದ್ದರು. ಅವರ ಮಾತಿಗೆ ಕಟ್ಟುಬಿದ್ದು ಬಿಜೆಪಿಗೆ ಬಂದೆ ಎಂದು ಹೇಳಿದರು.

‌ಈಗ ಶ್ರೀನಿವಾಸಪ್ರಸಾದ್ ಹಾಗೂ ಯಡಿಯೂರಪ್ಪ ಇಬ್ಬರೂ ನನ್ನ ಕೈಬಿಟ್ಟರು. ನನಗೆ  ಸಚಿವ ಸ್ಥಾನ ಕೊಡಿಸಲು ಯಾರೂ ಸಹಕಾರ ಕೊಡಲಿಲ್ಲ. ವಿಧಾನಪರಿಷತ್‌ ಸದಸ್ಯ ಸ್ಥಾನ ಸಿಗುವುದಕ್ಕೂ ಅವರಾರೂ ಕಾರಣರಲ್ಲ, ಸಹಾಯವನ್ನೂ ಮಾಡಲಿಲ್ಲ. ನನ್ನನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದವರು RSS ರಾಜ್ಯ ಪ್ರಮುಖ ಮುಕುಂದ ಎಂದರು.

ನನ್ನ ಹಾಗು ಶ್ರೀನಿವಾಸಪ್ರಸಾದ್ ಸ್ನೇಹ 50 ವರ್ಷದ್ದು. ಅದನ್ನೆಲ್ಲ ಮರೆತು ನಾನು ಮಲ್ಲಿಕಾರ್ಜುನ ಖರ್ಗೆಯವರ ಬಳಿ ಹೋಗಿದ್ದಕ್ಕೆ ನನ್ನನ್ನು ಅಲೆಮಾರಿ ಎಂದೆಲ್ಲಾ ಪ್ರಸಾದ್ ಈಚೆಗೆ ಟೀಕಿಸಿದ್ದಾರೆ. ಸ್ವಾರ್ಥಕ್ಕಾಗಿ ಅವರು ಸ್ನೇಹವನ್ನು ಮರೆತು ಮಾತನಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. 

ನೀವು ಎಲ್ಲಿದ್ದವರು ಶ್ರೀನಿವಾಸಪ್ರಸಾದ್? ನೀವು RSS ಕಾರ್ಯಕರ್ತರಾಗಿದ್ದವರು. ನಿಜಲಿಂಗಪ್ಪ ಅವರ ಸಂಸ್ಥಾ ಕಾಂಗ್ರೆಸ್ ಸೇರಿ, ಜನತಾ ಪಾರ್ಟಿ, ಕಾಂಗ್ರೆಸ್, ಸಮತಾ ಪಾರ್ಟಿ, JDU, JDSಗೆ ಹೋಗಿ ಬಂದಿದ್ದೀರಿ. ಆಮೇಲೆ ಕಾಂಗ್ರೆಸ್ ಸೇರಿದಿರಿ. ಈಗ BJPಯಲ್ಲಿದ್ದೀರಿ. ನೀವು ನನ್ನನ್ನು ಅಲೆಮಾರಿ ಎನ್ನುತ್ತೀರಲ್ಲಾ? ನೀವೇನು...? ಎಂದು ವಿಶ್ವನಾಥ್ ಕೇಳಿದರು.

Ads on article

Advertise in articles 1

advertising articles 2

Advertise under the article