'ಭಾರತ ಜೋಡೊ' ಯಾತ್ರೆ ಮೂಲಕ ದೇಶದ ದ್ವೇ#ಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ: ರಾಹುಲ್ ಗಾಂಧಿ

'ಭಾರತ ಜೋಡೊ' ಯಾತ್ರೆ ಮೂಲಕ ದೇಶದ ದ್ವೇ#ಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ: ರಾಹುಲ್ ಗಾಂಧಿ




ರಾಜಸ್ಥಾನ(Headlines Kannada): ನನ್ನ ಕೈಗೊಂಡಿರುವ ‘ಭಾರತ ಜೋಡೊ' ಯಾತ್ರೆ ಮೂಲಕ ದೇಶದ ದ್ವೇ#ಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ  ಹೇಳಿದ್ದಾರೆ.

‘ಭಾರತ ಜೋಡೊ' ರ‍್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧೀ, ‘ಯಾತ್ರೆಯು ಭರ್ಜರಿ 100 ದಿನಗಳನ್ನು ಪೂರೈಸಿದೆ. ಈ ಹಾದಿಯಲ್ಲಿ BJP ಕಚೇರಿಗಳ ಮೇಲೆ ನಿಂತು ಯಾತ್ರೆ ವೀಕ್ಷಿಸುತ್ತಿದ್ದ ಹಲವು ಸ್ನೇಹಿತರನ್ನು ಭೇಟಿ ಮಾಡಿದೆ. ಪ್ರಾರಂಭದಲ್ಲಿ ನಾನು ಕೈಬೀಸಿದರೆ BJP ಕಚೇರಿಗಳ ಮೇಲೆ ನಿಂತ ಪ್ರತಿಕ್ರಿಯಿಸುತ್ತಿರಲಿಲ್ಲ, ನಂತರ ಅವರು ಕೈಬೀಸಲು ಆರಂಭಿಸಿದರು’ ಎಂದರು. 

BJP ನಾಯಕರು ನನ್ನನ್ನು ನಿಂದಿಸುತ್ತಾರೆ, ಇಲ್ಲಿ ದ್ವೇ#ಷವನ್ನು ಬಿತ್ತುತ್ತಾರೆ. ‘BJP ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಹೊರಟಿರುವುದೇಕೆ ಎಂದು ಕೇಳುತ್ತಾರೆ. ಅದಕ್ಕೆ ನನ್ನ ಉತ್ತರ 'ದ್ವೇ#ಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ' ಎಂಬುದಾಗಿದೆ.

Ads on article

Advertise in articles 1

advertising articles 2

Advertise under the article