ಕಷ್ಟದಿಂದ ಬೇ#ಸತ್ತು ಶಿಕ್ಷಕಿ ಬಳಿ 500 ರೂ. ನೆರವು ಕೇಳಿದ್ದ ಬಡ ಮಹಿಳೆ; ಕೇವಲ 48 ಗಂಟೆಗಳಲ್ಲಿ ಸಿಕ್ಕಿತು 51 ಲಕ್ಷ ರೂ.!
ತಿರುವನಂತಪುರ(Headlines Kannada): ಗಂಡನನ್ನು ಕಳೆದುಕೊಂಡು ಮಕ್ಕಳನ್ನು ಸಾಕಲು ಪರದಾಡುತ್ತಿದ್ದ ಮಹಿಳೆಯೊಬ್ಬಳ ಕಷ್ಟ ಕಂಡು ಶಾಲಾ ಶಿಕ್ಷಕಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಕೇವಲ 48 ಗಂಟೆಗಳಲ್ಲಿ ಬಡ ಮಹಿಳೆಯ ಬ್ಯಾಂಕ್ ಖಾತೆಗೆ ₹51 ಲಕ್ಷ ಜಮೆಯಾಗಿದೆ.
ಪಾಲಕ್ಕಾಡ್ ಜಿಲ್ಲೆಯ ಕೂಟ್ಟನಾಡ್ ನಿವಾಸಿಯಾಗಿರುವ ಸುಭದ್ರ (46) ಎಂಬವರು ಗಂಡನ್ನು ಕ#ಳೆದುಕೊಂಡು ತನ್ನ ಮೂವರು ಮಕ್ಕಳನ್ನು ಸಾಕಲು ಹಣವಿಲ್ಲದೆ ಅ#ಸಹಾಯಕತೆಯಿಂದ ತನ್ನ ಮೂರನೇ ಮಗ ಓದುತ್ತಿದ್ದ ಶಾಲೆಯ ಶಿಕ್ಷಕಿ ಬಳಿಯೇ ₹500ಕ್ಕೆ ಅಂಗಲಾಚಿದ್ದು, ಈಗ ಈ ಮಹಿಳೆಗೆ ನೆರವಿನ ಮಹಾಪೂರವೇ ಹರಿದುಬಂದಿದೆ.
ಕೂಲಿ ಕೆಲಸ ಮಾಡುತ್ತಿದ್ದ ಪತಿ ರಾಜನ್ ಕೆಲ ತಿಂಗಳ ಹಿಂದೆ ನಿ#ಧನರಾಗಿದ್ದರು. ಹೀಗಾಗಿಮನೆ ಹಾಗು ಮಕ್ಕಳ ಸಾಕುವ ಜವಾಬ್ದಾರಿ ಸುಭದ್ರ ಅವರ ಹೆಗಲೇರಿತ್ತು. ಸೆರೆಬ್ರಲ್ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿದ್ದ ಎರಡನೇ ಮಗ ಅತುಲ್ ರಾಜ್ ಹಾಸಿಗೆ ಹಿಡಿದ ಕಾರಣ ಆತನ ಆರೈಕೆಗಾಗಿ ಮನೆಯಲ್ಲೇ ಇರುವುದು ಸುಭದ್ರಗೆ ಅನಿವಾರ್ಯವಾಗಿತ್ತು. ಹೀಗಾಗಿ ಕೂಲಿ ಕೆಲಸಕ್ಕೆ ಹೊರಗೆ ಹೋಗುವುದು ಕೂಡ ಕಷ್ಟವಾಗಿತ್ತು.
ಹೀಗಿರುವಾಗ ತನ್ನ ಕೊನೆಯ ಮಗ ಅಭಿಷೇಕ್ ರಾಜ್ ಓದುತ್ತಿದ್ದ ಸರ್ಕಾರಿ ಶಾಲೆಯೊಂದರಲ್ಲಿ 8ನೇ ತರಗತಿಯ ಶಾಲಾ ಶಿಕ್ಷಕಿ ಗಿರಿಜಾ ಹರಿಕುಮಾರ್ ಎಂಬವರಿಗೆ ಕಳೆದ ವಾರ ಕರೆ ಮಾಡಿದ್ದರು. ಈ ವೇಳೆ ಗಿರಿಜಾ ಹರಿಕುಮಾರ್ ಅವರ ಬಳಿ ಸುಭದ್ರ ₹500 ನೀಡುವಂತೆ ಕೇಳಿದ್ದರು. ಅವರ ಮನೆಯ ಪ#ರಿಸ್ಥಿತಿ ಆಲಿಸಿದ್ದ ಗಿರಿಜಾ ಅವರು ₹1,000 ನೆರವು ಒದಗಿಸಿದ್ದಲ್ಲದೆ, ಸುಭದ್ರಾ ಕುಟುಂಬದ ಕಷ್ಟದ ಪ#ರಿಸ್ಥಿತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಅದನ್ನು ನೋಡಿದ ಹಲವರು ದಾನಿಗಳು ಸುಭದ್ರ ಅವರಿಗೆ ಸಹಾಯ ಹಸ್ತ ನೀಡಿದ್ದಾರೆ.