ಗುಜರಾತ್‌ನಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಆಪ್‌ಗೆ ಬಿಜೆಪಿಯಿಂದಲೇ ಹಣಕಾಸಿನ ನೆರವು: ಸಿದ್ದರಾಮಯ್ಯ ಆರೋಪ
ಮೈಸೂರು(Headlines Kannada): ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿಯಿಂದ ಹಣಕಾಸಿನ ನೆರವು ನೀಡಲಾಗಿದೆ. ಕಾಂಗ್ರೆಸ್‌ನ ಓಟ್ ಅನ್ನು ವಿಭಜನೆ ಮಾಡುವ ಉದ್ದೇಶದಿಂದ ಬಿಜೆಪಿ ಆಪ್‌ಗೆ ಹಣ ನೀಡಿದೆ. ಇದರಿಂದ ಗುಜರಾತ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದ, ಕಾಂಗ್ರೆಸ್‌ಗೆ ಸೋತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಗುಜರಾತ್‌ನಲ್ಲಿ ಬಿಜೆಪಿಯ ಗೆಲುವಿನ ಬಗ್ಗೆ ನಮಗೆ ಮೊದಲೇ ನಿರೀಕ್ಷೆಯಿತ್ತು. ಏಕೆಂದರೆ ಆಪ್ ನಮ್ಮ ವೋಟ್‌ಗಳನ್ನು ಕಸಿಯುತ್ತಿದೆ. AAP ಪಡೆದಿರುವ ಮತಗಳೆಲ್ಲವೂ ಕಾಂಗ್ರೆಸ್‌ಗೆ ಸೇರಿದ್ದು. ಆದರೆ ಹಿಮಾಚಲ ಪ್ರದೇಶದಲ್ಲಿ ಹಾಗಾಗಿಲ್ಲ ಎಂದು ಹೇಳಿದರು.
ಗುಜರಾತ್‌ನಲ್ಲಿ AAP ಮಾಡಿರುವ ತಂತ್ರಗಾರಿಕೆ ಕರ್ನಾಟಕದಲ್ಲಿ ಮಾಡಲು ಸಾಧ್ಯವಿಲ್ಲ. AAP ಪಕ್ಷ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲ. ಇಲ್ಲಿ ಬಿಜೆಪಿ ಪಕ್ಷವು ಜೆಡಿಎಸ್ ಜೊತೆ ಸೇರಿ ಇಂತಹ ತಂತ್ರಗಾರಿಕೆ ಮಾಡಬಹುದು. ಗುಜರಾತ್‌ನಲ್ಲಿ AAP ತುಂಬಾ ಖರ್ಚು ಮಾಡಿ ಚುನಾವಣೆ ಮಾಡಿದೆ. ಆದರೂ ಅದಕ್ಕೆ ಹೆಚ್ಚಿನ ಸ್ಥಾನಗಳನ್ನು ಸಿಕ್ಕಿಲ್ಲ ಎಂದು ಹೇಳಿದರು ನೀಡಿದರು.
ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ ಇನ್ನೊಂದು ರಾಜ್ಯಕ್ಕೆ ಪ್ರಭಾವ ಬೀಳಲು ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ, ಆಯಾಯ ರಾಜ್ಯಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚುನಾವಣೆಯ ಫಲಿತಾಂಶಗಳು ಹೊರಬೀಳುತ್ತವೆ. ಕರ್ನಾಟಕದಲ್ಲಿ ಬಿಜೆಪಿ ಭ್ರಷ್ಟ ಸರ್ಕಾರ ನಡೆಸುತ್ತಿದ್ದರೆ, ಕಾಂಗ್ರೆಸ್ ತುಂಬಾ ಗಟ್ಟಿಯಾಗಿ ನಿಂತಿದೆ ಎಂದರು.