ಮೊಬೈಲ್ ಚ#ಟಕ್ಕೆ ಬಿದ್ದ ಬಾಲಕ; ಪೋಷಕರು ಬುದ್ಧಿ ಹೇಳಿದ್ದಕ್ಕೆ ಮಾಡಿಕೊಂಡಿದ್ದು ಮಾತ್ರ ಘನ#ಘೋ#ರ ಕೃ#ತ್ಯ!
ಬೆಂಗಳೂರು(Headlines Kannada): ಮಕ್ಕಳಿಗೆ ಮೊಬೈಲ್ ಚಟ ಹತ್ತಿದರೆ ಏನೆಲ್ಲ ಅನಾ#ಹುತ ಆಗುತ್ತೆ ಎಂಬುದಕ್ಕೆ ಈ ಒಂದು ಘಟನೆಯೇ ಸಾಕ್ಷಿ. ಮೊಬೈಲ್ ಬಿಟ್ಟು ಓದಿನ ಕಡೆ ಗಮನ ಕೊಡು ಎಂದು ಪೋಷಕರು ಹೇಳಿದ್ದಕ್ಕೆ ಬಾಲಕ ಮಾಡಿಕೊಂಡಿದ್ದು ಮಾತ್ರ ಘನ#ಘೋ#ರ ಕೃ#ತ್ಯ.
ಬೆಂಗಳೂರು-ಹೊಸೂರು ಮುಖ್ಯರಸ್ತೆಯ ಅತ್ತಿಬೆಲೆ ಎಂಬಲ್ಲಿನ ನಿವಾಸಿ 7ನೇ ತರಗತಿಯ 13 ವರ್ಷದ ವಿದ್ಯಾರ್ಥಿಯೊಬ್ಬ ಪೋಷಕರು ಮೊಬೈಲ್ ಬಿಟ್ಟು ಹೋಮ್ ವರ್ಕ್ ಮಾಡಿ ಓದುವ ಕಡೆ ಗಮನ ಹರಿಸುವಂತೆ ಬುದ್ದಿ ಹೇಳಿದ್ದಕ್ಕೆ ನೇ#ಣಿಗೆ ಶರಣಾಗಿದ್ದಾನೆ.
ಯಶಸ್ ಗೌಡ ಆ#ತ್ಮ#ಹ#ತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯಾಗಿದ್ದಾನೆ. ಪೋಷಕರ ಮಾತನ್ನು ಕೇಳದ ಬಾಲಕ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಸ್ಟೋರ್ ರೂಂನ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿದ್ದಾನೆ.
ಯಶಸ್ ತಂದೆ ರೈತನಾಗಿದ್ದು, ಮೃ#ತ ಬಾಲಕನಿಗೋ ಓರ್ವ ಸಹೋದರಿಯೊಬ್ಬಳಿದ್ದಾಳೆ. ಅತ್ತಿಬೆಲೆಯ ಸ್ವಾಮಿ ವಿವೇಕಾನಂದ ನಗರದ ಖಾಸಗಿ ಶಾಲೆಯಲ್ಲಿ ಯಶಸ್ ವ್ಯಾಸಂಗ ಮಾಡುತ್ತಿದ್ದ. ಆನ್‌ಲೈನ್ ತರಗತಿಗಳನ್ನು ಪರಿಚಯಿಸಿದಾಗಿನಿಂದ ಯಶಸ್'ಗೆ ಮೊಬೈಲ್ ಚ#ಟ ಹತ್ತಿದ್ದು, ಮಗನಿಂದ ಫೋನ್ ತೆಗೆದುಕೊಳ್ಳುವುದೇ ಕಷ್ಟವಾಗಿತ್ತು ಎಂದು ತಂದೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಲೆಯಿಂದ ಮನೆಗೆ ಬಂದ ನಂತರ ಯಶಸ್ ಫೋನ್ ಹಿಡಿದುಕೊಂಡು ಕುಳಿತು ಬಿಡುತ್ತಿದ್ದ. ಸರಿಯಾಗಿ ಹೋಮ್ ವರ್ಕ್ ಮಾಡಿದಡೆ, ಓದುವ ಕಡೆ ಗಮನ ಕೊಡದ ಕಾರಣ ಪೋಷಕರು ಕಂಗಾಲಾಗಿದ್ದರು. ಫೋನ್ ಇಲ್ಲಡಿದಾಗ ಟಿವಿ ನೋಡುತ್ತಾ ಕಾಲಕಳೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
1 ಗಂಟೆ ಕಳೆದರೂ ಬಾಲಕ ಹೊರಗೆ ಬಾರದಿದ್ದಾಗ ಆತನ ತಾಯಿ ಒಳಗೆ ಹೋಗಿ ಪರಿಶೀಲಿಸಿದಾಗ ಮಗ ನೇ#ಣು ಬಿಗಿದು#ಕೊಂಡಿರುವುದು ಕಂಡು ಬಂದಿದೆ.