ಮನೆಯಲ್ಲಿ ಕಳ್ಳತನ ಮಾಡಲು ಬಂದ ಕ#ಳ್ಳನಿಗೆ ಶೂ#ಟ್ ಮಾಡಿದ ಮಾಲೀಕ! ಮುಂದೆ ಏನಾಯಿತು ನೋಡಿ...

ಮನೆಯಲ್ಲಿ ಕಳ್ಳತನ ಮಾಡಲು ಬಂದ ಕ#ಳ್ಳನಿಗೆ ಶೂ#ಟ್ ಮಾಡಿದ ಮಾಲೀಕ! ಮುಂದೆ ಏನಾಯಿತು ನೋಡಿ...ಬೆಂಗಳೂರು(Headlines Kannada): ಮನೆಯಲ್ಲಿ ಕ#ಳ್ಳತನ ಮಾಡಲು ಬಂದ ಕಳ್ಳನಿಗೆ ಮನೆ ಮಾಲೀಕ ತನ್ನ ಬಳಿ ಇದ್ದ ಬಂ#ದೂಕಿನಿಂದ ಶೂ#ಟ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ  ರಾಚೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಬಾಗಲಕೋಟೆ ಮೂಲದ ಕಳ್ಳ ಲಕ್ಷ್ಮಣ್ ಎಂಬಾತನ ಮೇಲೆ ಮನೆ ಮಾಲೀಕ ವೆಂಕಟೇಶ್ ಎಂಬುವವರು ತನ್ನ ಬಂ#ದೂಕಿನಿಂದ ಶೂ#ಟ್ ಮಾಡಿದ್ದು, ಕ#ಳ್ಳತನ ಮಾಡಲು ಬಂದ ಲಕ್ಷ್ಮಣ್ ಕಾಲಿಗೆ ಗಾ#ಯವಾಗಿದ್ದು, ಪೊಲೀಸರು ಆತನನ್ನು ಬಂಧಿಸಿ, ಚಿಕಿತ್ಸೆ ನೀಡುತ್ತಿದ್ದಾರೆ.

ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕ#ಳ್ಳತನಕ್ಕೆ ಲಕ್ಷ್ಮಣ್ ಮನೆಗೆ ನುಗ್ಗಿದ್ದಾನೆ. ಈ ವೇಳೆ ಏನೋ ಸದ್ದಾಗಿದ್ದನ್ನು ಕೇಳಿ ಎಚ್ಚರಗೊಂಡ ಮನೆ ಮಾಲೀಕ ವೆಂಕಟೇಶ್ ಎದ್ದು ಬಂದಿದ್ದಾರೆ. ತನ್ನ  ರೂಮಿನೊಳಗೆ ಹೋಗಿ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದ್ದು, ಕಳ್ಳ ಕಂಪೌಂಡ್ ಗೋಡೆ ಹಾರಿ ಮನೆಯ ಒಳಗೆ ಬರುತ್ತಿರುವುದು ಕಂಡು ಬಂದಿದೆ. ಈ ವೇಳೆ ಬಂ#ದೂಕು ತಂದು ಗುಂ#ಡು ಹಾರಿಸಿದ್ದು, ಲಕ್ಷ್ಮಣನ ಕಾಲಿಗೆ ಗಾಯವಾಗಿದೆ. ಕೊಡಲೇ ಪೊಲೀಸರಿಗೆ ಪೊಲೀಸರಿಗೆ ಕರೆ ಮಾಡಿ ಅವರನ್ನು ಕರೆಸಿಕೊಂಡು ಆರೋಪಿಯನ್ನು ಅವರಿಗೆ ಒಪ್ಪಿಸಿದ್ದಾರೆ.

ಗಸ್ತು ತಿರುಗುತ್ತಿದ್ದ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಕ#ಳ್ಳನ ವಿರುದ್ಧ ಕ#ಳ್ಳತನದ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article