ವರದಕ್ಷಿಣೆ ಕಿರು#ಕುಳ ಪ್ರಕರಣ; ಕನ್ನಡದ ಹಿರಿಯ ನಟಿ ಅಭಿನಯಗೆ 2 ವರ್ಷ- ತಾಯಿಗೆ 5 ವರ್ಷ ಜೈ#ಲು ಶಿ#ಕ್ಷೆ ವಿಧಿಸಿದ ಹೈಕೋರ್ಟ್

ವರದಕ್ಷಿಣೆ ಕಿರು#ಕುಳ ಪ್ರಕರಣ; ಕನ್ನಡದ ಹಿರಿಯ ನಟಿ ಅಭಿನಯಗೆ 2 ವರ್ಷ- ತಾಯಿಗೆ 5 ವರ್ಷ ಜೈ#ಲು ಶಿ#ಕ್ಷೆ ವಿಧಿಸಿದ ಹೈಕೋರ್ಟ್



ಬೆಂಗಳೂರು (Headlines Kannada): ಕನ್ನಡದ ಹಿರಿಯ ನಟಿ ಅಭಿನಯಗೆ ಹೈಕೋರ್ಟ್ 2 ವರ್ಷ ಜೈ#ಲು ಶಿ#ಕ್ಷೆ ವಿಧಿಸಿದೆ. ಅತ್ತಿಗೆಗೆ ವರ#ದಕ್ಷಿಣಿ ಕಿರು#ಕುಳ ನೀಡಿದ್ದಕ್ಕಾಗಿ ಹಾಗೂ ಕೌಟುಂಬಿಕ ದೌ#ರ್ಜನ್ಯ ನಡೆಸಿದ್ದಕ್ಕಾಗಿ ಈ ಜೈ#ಲು ಶಿ#ಕ್ಷೆ ವಿಧಿಸಲಾಗಿದೆ. 

ಜೊತೆಗೆ ಅಭಿನಯ ಅವರ ತಾಯಿ ಜಯಮ್ಮ ಅವರಿಗೆ 5 ವರ್ಷ ಜೈ#ಲು ಶಿ#ಕ್ಷೆ ನೀಡಿ, ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಅಭಿನಯ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ ಈ ಬಗ್ಗೆ ಹಿಂದೆ ದೂರು ನೀಡಿದ್ದರು. ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಜಯಮ್ಮಗೆ 5 ವರ್ಷ ಶಿಕ್ಷೆ ಹಾಗೂ ಅಭಿನಯ ಸಹೋದರ ಚೆಲುವರಾಜ್​ಗೆ ಹೈಕೋರ್ಟ್  2 ವರ್ಷ ಶಿ#ಕ್ಷೆ ನೀಡಿದೆ. 

ಕನ್ನಡ ಚಿತ್ರರಂಗದಲ್ಲಿ ಹಾಗು ಧಾರಾವಾಹಿಗಳಲ್ಲಿ ಅಭಿನಯಾ ಅವರು ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಕಾಶೀನಾಥ್ ಅವರ ಸಿನಿಮಾ ‘ಅನುಭವ’ ಮೂಲಕ ಅವರು ಹೆಚ್ಚು ಗುರುತಿಸಿಕೊಂಡರು. ಆದರೆ ನಂತರ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗದಿದ್ದರೂ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಅವರು ಮನೆಮಾತಾದರು. ಈಗಲೂ ಅವರು ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ. 

2002ರಲ್ಲಿ ಲಕ್ಷ್ಮೀದೇವಿ ಎಂಬುವವರು ವರಕ್ಷಿಣೆ ಕಿರುಕುಳ ಸಂಬಂಧ ಅಭಿನಯಾ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. 1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಅವರನ್ನು ಲಕ್ಷ್ಮೀದೇವಿ ವಿವಾಹವಾಗಿದ್ದರು. ಈ ವೇಳೆ ವರಕ್ಷಿಣೆ ಪಡೆದಿದ್ದಲ್ಲದೆ, ನಂತರವೂ ಪದೇಪದೆ ಹಣ ತರುವಂತೆ ಲಕ್ಷ್ಮೀದೇವಿ ಅವರಿಗೆ ಕಿರು#ಕುಳ ನೀಡುತ್ತಿದ್ದರು. ವಿವಾಹದ ಸಮಯದಲ್ಲಿ 80,000 ರೂಪಾಯಿ ಹಾಗೂ 250 ಗ್ರಾಂ ಚಿನ್ನಾಭರಣ ಪಡೆದಿದ್ದರು. ಇದಾದ ನಂತರವೂ ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟು 20 ಸಾವಿರ ಪಡೆದ ನಂತರವೂ ಕಿರುಕುಳ ಕೊಡುತ್ತಿದ್ದರು. ಹಣ ಕೊಟ್ಟರೂ ಸಹ ನನ್ನನ್ನು ಪಾಲಕರ ಮನೆಯಲ್ಲಿ ಬಿಟ್ಟಿದ್ದರು ಎಂದು ದೂರಿನಲ್ಲಿ ಲಕ್ಷ್ಮೀದೇವಿ ಆರೋಪಿಸಿದ್ದರು.

Ads on article

Advertise in articles 1

advertising articles 2

Advertise under the article