ಉಡುಪಿ: ಕಾರಿನ ಗಾಜು ಒ#ಡೆದು ಸಾವಿರಾರು ರೂ. ನಗದು ಕ#ಳವು: ಜನನಿಬಿಡ ಸ್ಥಳದಲ್ಲೇ ಕರಾಮತ್ತು ತೋರಿದ ಕ#ಳ್ಳರು.!
Friday, December 23, 2022
ಉಡುಪಿ(Headlines Kannada): ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒ#ಡೆದು ಸಾವಿರಾರು ರೂ. ನಗದು ಕ#ಳವುಗೈದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ರಾಧ ಮೆಡಿಕಲ್ಸ್ ನ ಮುಂಭಾಗದಲ್ಲಿ ಗುರುವಾರ ರಾತ್ರಿ ನಡೆದಿದೆ.
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಸ್ಥಳದಲ್ಲೇ ಕ#ಳ್ಳರು ಕರಾಮತ್ತು ತೋರಿಸುವುದು ಎಲ್ಲರಿಗೂ ಅಚ್ಚರಿ ತಂದಿದೆ. ನಿಲ್ಲಿಸಿದ್ದ ಕಾರಿನ ಮುಂಭಾಗ, ಚಾಲಕನ ಸೀಟಿನ ಬದಿಯ ಗಾಜನ್ನು ಒಡೆದು ಸುಮಾರು 40 ಸಾವಿರ ರೂ. ಕ#ಳ್ಳರು ದೋಚಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.