
ದಕ್ಷಿಣ ಕನ್ನಡ ಜಿಲ್ಲೆಯ 508 ಮಸೀದಿ, ಮದ್ರಸ ಮ್ಯಾನೇಜ್ಮೆಂಟ್'ನ ನೂತನ ಅಧ್ಯಕ್ಷರಾಗಿ A.H.ನೌಶಾದ್ ಹಾಜಿ ಸೂರಲ್ಪಾಡಿ ಅವಿರೋಧ ಆಯ್ಕೆ
ಮಂಗಳೂರು (Headlines Kannada): ದಕ್ಷಿಣ ಕನ್ನಡ ಜಿಲ್ಲೆಯ 508 ಮಸೀದಿ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಇದರ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಸಮಾಜ ಸೇವಕ A.H.ನೌಶಾದ್ ಹಾಜಿ ಸೂರಲ್ಪಾಡಿ ಅವಿರೋಧ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 508 ಮಸೀದಿ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ, ಸಾವಿರಾರು ಮಂದಿ ಉಸ್ತಾದರು ವಿದ್ಯಾರ್ಥಿಗಳಿಗೆ ಕಲಿಸುವ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಡ ಕುಟುಂಬದಿಂದ ಬಂದಿರುವ ನೌಶಾದ್ ಹಾಜಿ, ಸಮಾಜಮುಖಿ ಕಾರ್ಯದಲ್ಲೇ ತನ್ನನ್ನು ತೊಡಗಿಸಿಕೊಂಡಿದ್ದು, ಎಲ್ಲರಿಗೂ ಚಿರಪರಿಚಿತರಾಗಿದ್ದುಕೊಂಡೇ ತನ್ನ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
ಹಲವಾರು ಬಡ, ನಿರ್ಗತಿಕರ ಪಾಲಿನ ಆಶಾಕಿರಣ, ಸಮಾಜ ಸೇವೆಯಲ್ಲಿ ಎತ್ತಿದ ಕೈ, ಸದಾ ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡಿರುವ A.H.ನೌಶಾದ್ ಹಾಜಿ ಸೂರಲ್ಪಾಡಿ ಅವರು ನೂರಾರು ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷ, ಗೌರವಾಧ್ಯಕ್ಷ ಸೇರಿದಂತೆ ಉನ್ನತ ಸ್ಥಾನದಲ್ಲಿದ್ದು ಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.
ಪಾಣಕ್ಕಾಡ್ ಮೊಹಮ್ಮದಲಿ ಶಿಯಾಬ್ ತಂಗಳ್ ಹೆಸರಿನಲ್ಲಿರುವ ನೇಶನಲ್ ಮಿಷನ್ ಇದರ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ, ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ, ಇವರ ನೇತೃತ್ವದಲ್ಲಿ 500ಕ್ಕೂ ಅಧಿಕ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ನೆರವೇರಿದ್ದು, ಇವರ ನೇತೃತ್ವದಲ್ಲಿ ಬಿಜಾಪುರದಲ್ಲಿ 2 -3 ಮಸೀದಿ, ಹಲವು ಮದ್ರಸ ಆರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ನಡೆಯುತ್ತಿದೆ.
ಗುರುಪುರ-ಕೈಕಂಬ ಸುಮಾರು 60 ಜಮಾತಿಗೆ ಒಳಪಟ್ಟ ಸಂಸ್ಥೆ 'ಸಂವಿಧಾನ ಸಂರಕ್ಷಣಾ ವೇದಿಕೆ' ಇದರ ಉಪಾಧ್ಯಕ್ಷರಾಗಿ, ಗುರುಪುರದ 35 ಮಸೀದಿ-ಮದ್ರಸದ ರೇಂಜ್ ಮದ್ರಸ ಮೆನೇಜ್ಮೆಂಟಿನ ಅಧ್ಯಕ್ಷರಾಗಿ, ಗಂಜಿಮಠ ನಾರ್ಲಪದವು ಶಬೀಯುರ್ರಶಾದ್ ಜುಮ್ಮಾ ಮಸೀದಿ ಅಧ್ಯಕ್ಷರು, ಸೂರಲ್ಪಾಡಿ ಮಲ್ಹರ್ಲ್ ಅವಾಕಿಫ್ ಜುಮ್ಮಾ ಮಸೀದಿ ಉಪಾಧ್ಯಕ್ಷ, ಹಯಾತುಲ್ ಇಸ್ಲಾಂ ಮಸೀದಿ ಗಾಂಧಿನಗರ ಇದರ ಗೌರವಾಧ್ಯಕ್ಷರು, ಮುಸ್ಲಿಂ ಸೆಂಟ್ರಲ್ ಕಮಿಟಿ ದಕ -ಉಡುಪಿ ಜೆಲ್ಲೆಯ ಸದಸ್ಯರಾಗಿ, ಗಂಜಿಮಠ ಸೂರಲ್ಪಾಡಿ ಲಯನ್ಸ್ ಕ್ಲಬಿನ ಚಾರ್ಟೆಡ್ ಪ್ರೆಸಿಡೆಂಟ್, 'ನಂಡೆ ಪೆಂಙಳ್' ಸಂಘಟನೆಯ ಸ್ಥಾಪಕ ಅಧ್ಯಕ್ಷ, ಅಲ್ ಖೈರ್ ಎಜುಕೇಷನ್ ಸೆಂಟರಿನ ಟ್ರಸ್ಟಿ, ಬಂಟ್ವಾಳ ಅರಳ ಮೊಹಿದ್ದೀನ್ ಜುಮ್ಮಾ ಮಸೀದಿಯಾ ಮಾಜಿ ಅಧ್ಯಕ್ಷ, ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಟಣ ಜೊತೆ ಕಾರ್ಯದರ್ಶಿಯಾಗಿ, ಬೆಳ್ತಂಗಡಿಯ ದಾರುಸ್ಸಲಾಮ್ ಎಜುಕೇಷನ್ ಸೆಂಟರ್ ಇದರ ಕೋಶಾಧಿಕಾರಿಯಾಗಿ, ದಾರುನ್ನೂರ್ ಸೆಂಟ್ರಲ್ ಕಮಿಟಿ ಜೊತೆ ಕಾರ್ಯದರ್ಶಿ, ನಮ್ಮ ನಾಡ ಒಕ್ಕೂಟದ ಪದಾಧಿಕಾರಿ, ಗಂಜಿಮಠ-ಕೈಕಂಬ ಸೌಹಾರ್ದ ಸಮಿತಿಯ ಉಪಾಧ್ಯಕ್ಷ ಸೇರಿದಂತೆ ಇನ್ನು ಹಲವಾರು ಸಂಘ-ಸಂಸ್ಥೆಗಳಲ್ಲಿ ನೌಶಾದ್ ಹಾಜಿ ಅವರು ತನ್ನನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.
ಸಿತಾರ್ ಮಜೀದ್ ಹಾಜಿಯವರಿಂದ ಅಭಿನಂದನೆ
ನಿಷ್ಠಾವಂತ, ಪ್ರಾಮಾಣಿಕರಾಗಿದ್ದುಕೊಂಡು, ಬಡವರಿಗಾಗಿ ಸೇವೆ ಸಲ್ಲಿಸುತ್ತಿರುವ A.H.ನೌಶಾದ್ ಹಾಜಿ ಸೂರಲ್ಪಾಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ 508 ಮಸೀದಿ, ಮದ್ರಸ ಮ್ಯಾನೇಜ್ಮೆಂಟ್'ನ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿರುವುದನ್ನು ಸಮಾಜ ಸೇವಕ, ಉದ್ಯಮಿ ಸಿತಾರ್ ಮಜೀದ್ ಹಾಜಿಯವರು ಅಭಿನಂದಿಸಿದ್ದು, ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದ್ದಾರೆ.