ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಮೂ#ತ್ರ ವಿ#ಸರ್ಜನೆ; ತಲೆಮರೆಸಿಕೊಂಡಿದ್ದ ಶಂಕರ್ ಮಿಶ್ರಾ ಬಂಧನ
ಬೆಂಗಳೂರು: ನವೆಂಬರ್ 26ರಂದು ನ್ಯೂಯಾರ್ಕ್‍ನಿಂದ ನವದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಸಹಪ್ರಯಾಣಿಕ ಕಂ#ಠಪೂರ್ತಿ ಕು#ಡಿದು ಮೂ#ತ್ರ ವಿ#ಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾ ಎಂಬಾತನನ್ನು ಶನಿವಾರ ಬೆಂಗಳೂರಿನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ಮೂ#ತ್ರ ವಿ#ಸರ್ಜಿಸಿದ ಕುರಿತಾಗಿ ಮಹಿಳೆ ಟಾಟಾ ಸನ್ಸ್ ಗ್ರೂಪ್‍ನ ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದರು. ಈ ಘಟನೆಯ ಬಳಿಕ ಆರೋಪಿ ಶಂಕರ್ ಮಿಶ್ರಾ ತಲೆಮರೆಸಿಕೊಂಡಿದ್ದ. ತಲೆಮರೆಸಿಕೊಂಡು ಬೆಂಗಳೂರಿನಲ್ಲಿರುವ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ಬೆಂಗಳೂರಿಗೆ ಆಗಮಿಸಿ ಆರೋಪಿ ಪತ್ತೆಗಾಗಿ ಕಾರ್ಯಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಬೆಂಗಳೂರಿನ ಸಂಜಯ್ ನಗರ ಗೆಸ್ಟ್ ಹೌಸ್‍ನಲ್ಲಿ ತಲೆಮರೆಸಿಕೊಂಡಿದ್ದ ಶಂಕರ್ ಮಿಶ್ರಾನ ಬಂಧವಾಗಿದೆ.
ಮಿಶ್ರಾ ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೆರಿಕದ ಬಹುರಾಷ್ಟ್ರೀಯ ಹಣಕಾಸು ಸೇವೆಗಳ ಕಂಪನಿಯಾದ ವೆಲ್ಸ್ ಫಾರ್ಗೋದ ಇಂಡಿಯಾ ಚಾಪ್ಟರ್‌ನ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವೆಲ್ಸ್ ಫಾರ್ಗೋ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಕಚೇರಿಯನ್ನು ಹೊಂದಿದ್ದು, ಮಿಶ್ರಾ ಆಗಾಗ್ಗೆ ಭೇಟಿ ನೀಡುತ್ತಿದ್ದರು.
ದೆಹಲಿ ಪೊಲೀಸರು ಆರೋಪಿ ಮಿಶ್ರಾ ವಿರುದ್ಧ ಸೆಕ್ಷನ್ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ), 354 (ಮಹಿಳೆ ಮೇಲೆ ಹ#ಲ್ಲೆ ಅಥವಾ ಕ್ರಿ#ಮಿನಲ್ ಪ್ರಕರಣ), 509, ಮತ್ತು ಐಪಿಸಿಯ 510 (ಮ#ದ್ಯ ಸೇವಿಸಿದ ವ್ಯಕ್ತಿಯಿಂದ ಸಾರ್ವಜನಿಕವಾಗಿ ದುರ್ವರ್ತನೆ) ಹಾಗೂ ವಿಮಾನ ನಿಯಮಗಳ ಅಡಿಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.