ವಿಧಾನಸಭಾ ಚುನಾವಣೆ; SDPI ಮೊದಲ ಪಟ್ಟಿ ಬಿಡುಗಡೆ: ಇಲ್ಯಾಸ್ ತುಂಬೆ, ಭಾಸ್ಕರ್ ಪ್ರಸಾದ್, ಅಲ್ಫೋನ್ಸೋ, ಹನೀಫ್ ಮುಳೂರು ಸೇರಿದಂತೆ 10 ಮಂದಿಗೆ ಟಿಕೆಟ್

ವಿಧಾನಸಭಾ ಚುನಾವಣೆ; SDPI ಮೊದಲ ಪಟ್ಟಿ ಬಿಡುಗಡೆ: ಇಲ್ಯಾಸ್ ತುಂಬೆ, ಭಾಸ್ಕರ್ ಪ್ರಸಾದ್, ಅಲ್ಫೋನ್ಸೋ, ಹನೀಫ್ ಮುಳೂರು ಸೇರಿದಂತೆ 10 ಮಂದಿಗೆ ಟಿಕೆಟ್

ಬೆಂಗಳೂರು(Headlines Kannada): ಮುಂಬರುವ ವಿಧಾನಸಭಾ ಚುನಾವಣೆಗೆ SDPIಪಕ್ಷ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 

224  ಕ್ಷೇತ್ರಗಳ  ಪೈಕಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸುವ SDPI ಮೊದಲ ಹಂತದಲ್ಲಿ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಜೊತೆಗೆ ಮೊದಲ ಹಂತದಲ್ಲಿ 54 ಕ್ಷೇತ್ರಗಳ ಹೆಸರನ್ನು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಡುಗಡೆ ಮಾಡಿದೆ.









ಈ ವೇಳೆ ಮಾತನಾಡಿದ ಎಸ್​ಡಿಪಿಐನ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ನಾವು ಅಧಿಕಾರವನ್ನು ಮೆರೆಯಲು ರಾಜಕಾರಣ ಮಾಡಲ್ಲ, ನಮ್ಮದು ಜನಪರ ರಾಜಕಾರಣ. ನಮ್ಮ ದೇಶದ ಹಿತಾಸಕ್ತಿಯೇ ನಮ್ಮ ರಾಜಕಾರಣ. ರಾಜ್ಯದಲ್ಲಿ ಇದುವರೆಗೂ 300 ಜನಪ್ರತಿನಿಧಿಗಳು ಯಾವುದೇ ಭ್ರಷ್ಟಾಚಾರವಿಲ್ಲದೇ ಅಧಿಕಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ಭ್ರಷ್ಟಾಚಾರರಹಿತ ಜನಪರ ಸೇವೆಯನ್ನ ನಾವೂ ಮಾಡುತ್ತೇವೆ. ಅದಕ್ಕಾಗಿ ನಮಗೆ ಅನುಕೂಲ ಮಾಡಬೇಕು ಅಂತಾ 7 ಕೋಟಿ ಜನರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಇಡೀ ಸಂದರ್ಭದಲ್ಲಿ SDPI ರಾಷ್ಟ್ರೀಯ ಅಧ್ಯಕ್ಷ ಎಮ್.ಕೆ ಪೈಝಿ ಅವರು, SDPI ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದರು.

2023ರ ಚುನಾವಣೆಗೆ ಎಸ್​ಡಿಪಿಐ 10 ಮಂದಿಯ ಮೊದಲ ಹಂತದ ಪಟ್ಟಿ ಹೀಗಿದೆ...

ನರಸಿಂಹರಾಜ – ಅಬ್ದುಲ್ ಮಜೀದ್ ಮೈಸೂರು

ಪುಲಕೇಶಿ ನಗರ – ಬಿ.ಆರ್ ಭಾಸ್ಕರ್ ಪ್ರಸಾದ್

ಸರ್ವಜ್ಞ ನಗರ (ಬೆಂಗಳೂರು ) – ಅಬ್ದುಲ್ ಹನ್ನಾನ್

ಬಂಟ್ವಾಳ ( ದಕ್ಷಿಣ ಕನ್ನಡ) – ಇಲ್ಯಾಸ್ ಮಹಮ್ಮದ್ ತುಂಬೆ

ಮೂಡಬಿದಿರೆ ( ದಕ್ಷಿಣ ಕನ್ನಡ) – ಅಲ್ಫೋನ್ಸೋ ಫ್ರಾಂಕೋ

ಬೆಳ್ತಂಗಡಿ ( ದಕ್ಷಿಣ ಕನ್ನಡ) – ಅಕ್ಬರ್ ಬೆಳ್ತಂಗಡಿ

ಕಾಪು ( ಉಡುಪಿ ) - ಹನೀಫ್ ಮುಳೂರು

ದಾವಣಗೆರೆ ದಕ್ಷಿಣ ( ದಾವಣಗೆರೆ) – ಇಸ್ಮಾಯಿಲ್ ಝಬೀವುಲ್ಲಾ

ಚಿತ್ರದುರ್ಗ – ಬಾಳೆಕಾಯಿ ಶ್ರೀನಿವಾಸ್

ವಿಜಯನಗರ – ನಝೀರ್ ಖಾನ್

100 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲು ಪಕ್ಷ ತೀರ್ಮಾನಿಸಿರುವುದಾಗಿ ಮಾಹಿತಿ ನೀಡಿದ ಎಂ.ಕೆ ಫೈಝಿ ಅವರು, ಶೀಘ್ರದಲ್ಲೇ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.

10 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯ ಜೊತೆಗೆ ಉಳಿದ 44 ಕ್ಷೇತ್ರಗಳ ಹೆಸರನ್ನುSDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ತಿಳಿಸಿದರು. ಈ ಮೂಲಕ SDPI ಸ್ಪರ್ಧಿಸಲಿರುವ 54 ಕ್ಷೇತ್ರಗಳ ಪಟ್ಟಿ ಫೈನಲ್ ಆಗಿದೆ.

SDPI ಸ್ಪರ್ಧಿಸಲಿರುವ ಉಳಿದ 44 ವಿಧಾನಸಭಾ ಕ್ಷೇತ್ರಗಳು ಈ ಕೆಳಗಿನಂತಿವೆ...

ರಾಯಚೂರು ನಗರ, ಚಾಮರಾಜನಗರ, ಮಂಗಳೂರು(ಉಳ್ಳಾಲ), ಪುತ್ತೂರು, ಮಡಿಕೇರಿ, ವಿರಾಜಪೇಟೆ, ಕೋಲಾರ, ಹಾವೇರಿ, ಮಂಡ್ಯ ನಗರ, ತುಮಕೂರು ನಗರ, ಶಿರಾ, ಭಟ್ಕಳ, ಶಿರಸಿ, ಶಹಾಪುರ,ಯಾದಗಿರಿ ನಗರ, ಶಿವಾಜಿನಗರ, ಹೆಬ್ಬಾಳ, ಶಾಂತಿನಗರ, ಬ್ಯಾಟರಾಯನಪುರ, ಹೊಸಕೋಟೆ, ಹುಬ್ಬಳ್ಳಿ ಪಶ್ಚಿಮ, ಚಾಮರಾಜ(ಮೈಸೂರು) ಹುಣಸೂರು, ಮುಳಬಾಗಿಲು, ರಾಮನಗರ, ಹಾಸನ, ಸಕಲೇಶಪುರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮಾಂತರ, ಶಿವಮೊಗ್ಗ ನಗರ, ತೇರದಾಳ(ಬಾಗಲಕೋಟೆ), ವಿಜಯಪುರ, ಮಂಗಳೂರು ಉತ್ತರ(ಸುರತ್ಕಲ್), ಚನ್ನಗಿರಿ, ಹಿರಿಯೂರು, ಭದ್ರಾವತಿ, ಬಾಗಲಕೋಟೆ ನಗರ, ದೇವದುರ್ಗ(ರಾಯಚೂರು)

Ads on article

Advertise in articles 1

advertising articles 2

Advertise under the article