ಶಿರಸಿಯಲ್ಲಿ ಬಹಳ ಅದ್ದೂರಿಯಾಗಿ ನಡೆದ ಅಲ್ ಬಿರ್ರ್ ಪ್ರಿ ಪ್ರೈಮರಿ ಸ್ಕೂಲ್'ನ 'ಅಲ್ ಬಿರ್ರ್ ಕಿಡ್ಸ್ ಫೆಸ್ಟ್-2023'
ಶಿರಸಿ(Headlineskannada): ಇಲ್ಲಿನ ಉಸಾರಿ ರೋಡಿನ ಅಲ್ ಬಿರ್ರ್ ಪ್ರಿ ಪ್ರೈಮರಿ ಸ್ಕೂಲ್'ನ ಹಿಸ ಗಾರ್ಡನ್'ನಲ್ಲಿ ರವಿವಾರ ಶಿರಸಿ-ಸಾಗರ-ಹಾನಗಲ್'ನ ಅಲ್ ಬಿರ್ರ್ ಪ್ರಿ ಪ್ರೈಮರಿ ಸ್ಕೂಲ್ ಇದರ 'ಅಲ್ ಬಿರ್ರ್ ಕಿಡ್ಸ್ ಫೆಸ್ಟ್-2023' ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು.
ಶಿರಸಿಯ ಹಯಾತುಲ್ ಇಸ್ಲಾಂ ಶಾಫಿ ಟ್ರಸ್ಟಿನ ಅಧ್ಯಕ್ಷ, ಉದ್ಯಮಿ, ಸಮಾಜಸೇವಕ, ಕೊಡುಗೈ ದಾನಿ ಹಾಜಿ ಕೆ.ಅಬ್ದುಲ್ ಕರೀಂ ಅಧ್ಯಕ್ಷತೆಯಲ್ಲಿ ನಡೆದ 'ಅಲ್ ಬಿರ್ರ್ ಕಿಡ್ಸ್ ಫೆಸ್ಟ್-2023' ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ದಾರುಲ್ ಹುದಾ ಹಾನಗಲ್ ಆಫ್ ಕ್ಯಾಂಪಸ್'ನ ಪ್ರಾಂಶುಪಾಲರಾದ ಶಫೀಕ್ ಅಹ್ಮದ್ ಹುದವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಕಾರ್ಯಕ್ರಮದಲ್ಲಿ ಪ್ಯಾರೆಂಟಿಗ್ ಆಗಿ SKIMVB Board ಮುಫತ್ತಿಶ್ ಉಮರ್ ದಾರಿಮಿ ಸಾಲ್ಮಾರ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಲ್ ಬಿರ್ರ್ ಸ್ಕೂಲ್'ನ ಇನ್ಸ್ಪೆಕ್ಟರ್ ಎಂ.ಕೆ.ಅಹಮದ್ ಸರ್, ಮುಬಿನ್ ಹುದವಿ ಪಾಲ್ಗೊಂಡಿದ್ದು, ಅಲ್ ಬಿರ್ರ್'ನ ಕೋಆರ್ಡಿನೇಟರ್ ಉಮರುಲ್ ಫಾರೂಕ್ ಮದನಿ ಸ್ವಾಗತ ಭಾಷಣ ಮಾಡಿದರು.
ಕೆ.ಹುಸೇನಬ್ಬ, ಕೆ.ಅಬ್ದುಲ್ ಮಜೀದ್, ಮುಹಮ್ಮದ್, ಡಾ.ಜಹೀರ್ ಅಹಮದ್, ಮುಫ್ತಿ ಹಜರತ್ ಅಲ್ಲಮ ಮುಜಫರ್ ಹುಸೈನ್, ಇಕ್ಬಾಲ್ ಬಿಲಗಿ, ಇಬ್ರಾಹಿಂ ಸಾಗರ, ಮುಹಮ್ಮದ್ ಹನೀಫ್ ಶಿಕಾರಿಪುರ, ಮುಹಮ್ಮದ್ ವಾಸೀಮ್ ಚಾರ್ಲಿ, ಇಸ್ಮಾಯಿಲ್ ಸಾಬ್, ಭಾಷಾ ಸಾಬ್, ಮುಹಮ್ಮದ್ ಅಲಿ ಚೌಟಿ ಮೊದಲಾದವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಲ್ ಬಿರ್ರ್ ಪ್ರಿ ಪ್ರೈಮರಿ ಸ್ಕೂಲ್ ಮಕ್ಕಳಿಂದ ವಿವಿಧ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.