ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕರಾಗಿ ಡಾ.ಭೀಮಣ್ಣ ಮೇಟಿ ನೇಮಕ: ಮಲ್ಲು ಹಲಗಿ ಕುರಕುಂದಾ ಹರ್ಷ

ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕರಾಗಿ ಡಾ.ಭೀಮಣ್ಣ ಮೇಟಿ ನೇಮಕ: ಮಲ್ಲು ಹಲಗಿ ಕುರಕುಂದಾ ಹರ್ಷ

ಯಾದಗಿರಿ: 2023ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ನಾಯಕ ಡಾ ಭೀಮಣ್ಣ ಮೇಟಿ‌ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕರನ್ನಾಗಿ ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ ಅವರು ಆದೇಶ ಹೊರಡಿಸಿದ್ದಾರೆ. 

ಡಾ ಭೀಮಣ್ಣ ಮೇಟಿಯವರು ವಿದ್ಯದಾನ, ರಕ್ತದಾನ, ಆರೋಗ್ಯಶಿಬಿರ ಹಾಗೂ ಸಂಕಷ್ಟದಲ್ಲಿ ಇರುವ ಹಲವಾರು ಜನರಿಗೆ ಸಹಾಯ ಮಾಡಿ ಮಾನವೀಯತೆಯನ್ನು ಮೆರೆದ ಅವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಮಾದರಿಯಾಗಿದ್ದಾರೆ. ಈ ಸಂಬಂಧ ಡಾ ಭೀಮಣ್ಣ ಮೇಟಿಯವರಿಗೆ ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆ ಸಿಕ್ಕಿರುವದು ಸಂತಸ ತಂದಿದ್ದು ನಮಗೆ ಸಂತಸ ತಂದಿದೆ ಎಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗ ಸಂಘಟನಾ ಕಾರ್ಯದರ್ಶಿ ಮಲ್ಲು ಹಲಗಿ ಹೇಳಿದ್ದಾರೆ.


Ads on article

Advertise in articles 1

advertising articles 2

Advertise under the article