ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ ಮೇಲೆ ಗುಂ#ಡು ಹಾರಿಸಿದ 6 ವರ್ಷದ ಬಾಲಕ! ಮುಂದೆ ಏನಾಯಿತು....

ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ ಮೇಲೆ ಗುಂ#ಡು ಹಾರಿಸಿದ 6 ವರ್ಷದ ಬಾಲಕ! ಮುಂದೆ ಏನಾಯಿತು....ನಾರ್ಫೋಕ್(Headlines Kannada): ಅಮೆರಿಕದ ವರ್ಜೀನಿಯಾದ ಶಾಲೆಯಲ್ಲಿ ಶುಕ್ರವಾರ ಪಾಠ ಮಾಡುತ್ತಿದ್ದ ಶಿಕ್ಷಕಿಯ ಮೇಲೆ 6 ವರ್ಷದ ಬಾಲಕ ಗುಂ#ಡು ಹಾರಿಸಿ ಗಾಯಗೊಳಿಸಿರುವ ಘಟನೆ ನ್ಯೂಪೋರ್ಟ್ ನ್ಯೂಸ್ ನಗರದ ಪೊಲೀಸರು ತಿಳಿಸಿದ್ದಾರೆ.

ರಿಚ್ನೆಕ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿಯ ಜೊತೆ ನಡೆದ ವಾಗ್ವಾದದ ಸಂದರ್ಭದಲ್ಲಿ ಗುಂ#ಡಿನ ದಾ#ಳಿ ನಡೆದಿದೆ. ಗುಂ#ಡಿನ ದಾ#ಳಿಯಲ್ಲಿ ಯಾವುದೇ ವಿದ್ಯಾರ್ಥಿಗಳು ಗಾಯಗೊಂಡಿಲ್ಲ ಎಂದಿರುವ ಪೊಲೀಸರು, 30 ವರ್ಷದ ಶಿಕ್ಷಕಿ ಗಂ#ಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ವೇಳೆ ಗಾಯಗೊಂಡ ಶಿಕ್ಷಕಿಯನ್ನು ಶಾಲಾ ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಮಧ್ಯಾಹ್ನದ ವೇಳೆಗೆ ಅವರು ಚೇತರಿಸಿಕೊಂಡಿದ್ದಾರೆ ಎಂದು ನ್ಯೂಪೋರ್ಟ್ ನ್ಯೂಸ್ ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರೂ ಹೇಳಿದ್ದಾರೆ.

ಶಿಕ್ಷಕಿ ಮೇಲೆ ಗುಂ#ಡು ಹಾರಿಸಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಘಟನೆ ಆಕಸ್ಮಿಕವಲ್ಲ ಎಂದಿರುವ ಅಧಿಕಾರಿಗಳು, ಬಾಲಕನ ಕೈಗೆ ಬಂ#ದೂಕು ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article