ಹುಟ್ಟುಹಬ್ಬಕ್ಕೆ ತಂದೆಗೆ ದುಬಾರಿ 'ಗಿಫ್ಟ್' ನೀಡಿದ ಮಗಳು! ಕೊಂಡಾಡಿದ ನೆಟ್ಟಿಗರು..! ಕೊಟ್ಟ ಗಿಫ್ಟ್ ಏನು ?

ಹುಟ್ಟುಹಬ್ಬಕ್ಕೆ ತಂದೆಗೆ ದುಬಾರಿ 'ಗಿಫ್ಟ್' ನೀಡಿದ ಮಗಳು! ಕೊಂಡಾಡಿದ ನೆಟ್ಟಿಗರು..! ಕೊಟ್ಟ ಗಿಫ್ಟ್ ಏನು ?ಬೆಂಗಳೂರು(Headlines Kannada): ಹುಟ್ಟುಹಬ್ಬದ ದಿನ ಜನ ಏನಲ್ಲ ವಸ್ತುಗಳನ್ನು ಗಿಫ್ಟ್ ಆಗಿ ನೀಡುತ್ತಾರೆ. ಅದನ್ನು ನೀಡುವ ಸಂತೋಷ ಒಂದು ಕಡೆಯಾದರೆ, ಇನ್ನೊಂದು ಕಡೆ ಅದನ್ನು ಪಡೆದವರ ಖುಷಿ. ತಂದೆಯಾದವ ಮಕ್ಕಳಿಗಾಗಿ ಏನೆಲ್ಲಾ ತ್ಯಾಗ ಮಾಡುತ್ತಾರೆ. ಮಕ್ಕಳ ಕನಸನ್ನು ಈಡೇರಿಸಲು ತನ್ನ ಜೀವನವನ್ನೇ ಸವೆಸುತ್ತಾನೆ.  ಆದರೆ ಇದಕ್ಕೆ ತದ್ವಿರುದ್ಧವಾದ ವೀಡಿಯೋವೊಂದು ವೈರಲ್ ಆಗಿದೆ.

ಅಪ್ಪನ ಹುಟ್ಟುಹಬ್ಬದ ದಿನ ಆತನ ಕನಸಿನ ಕಾರನ್ನು ಮಗಳು ಕೊಡಿಸಿ ಅಪ್ಪನಿಗೆ ಅಚ್ಚರಿ ಮೂಡಿಸಿದ್ದಾಳೆ. ಈ ವಿಡಿಯೋ ಅನ್ನು ಈತನಕ 5 ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ರಿದಾ ಥರನಾ ಈ ಪೋಸ್ಟ್'ನ್ನು Instagramನಲ್ಲಿ ಹಂಚಿಕೊಂಡಿದ್ದಾರೆ. ರಿದಾ ಜನವರಿ 3ರಂದು ತನ್ನ ಹುಟ್ಟೂರು ಕೂರ್ಗ್​ಗೆ ಹೋಗಿದ್ದು,  ಮರುದಿನವೇ ತಂದೆಯ ಹುಟ್ಟುಹಬ್ಬವಾಗಿತ್ತು.  ಅಂದೇ ಅವರ ಕನಸಿನ ಕಾರ್ ಅನ್ನು ಡೆಲಿವರಿ ಪಡೆಯುವ ವ್ಯವಸ್ಥೆಯನ್ನು ರಿದಾ ಮೊದಲೇ ಮಾಡಿಕೊಂಡಿದ್ದರು. ಈ ಖುಷಿಯ ಘಳಿಗೆಗಳನ್ನು ಚಿತ್ರೀಕರಿಸಿದ ರಿದಾ, ಈ ವೀಡಿಯೋವನ್ನು ಇನ್​ಸ್ಟಾಗ್ರಾಂಗೆ ಅಪ್​ಲೋಡ್ ಮಾಡಿದರು.

ಈ ವೀಡಿಯೊ ನೋಡಿದ ನೆಟ್ಟಿಗರು, ಭಾವುಕರಾಗಿದ್ದಾರೆ ಮತ್ತು ಸ್ಫೂರ್ತಿಗೊಂಡಿದ್ದಾರೆ. ರಿದಾಳ ಈ ಗಿಫ್ಟ್'ನ್ನು ನೋಡಿ  ಜನ ಕೊಂಡಾಡಿದ್ದಾರೆ.


Ads on article

Advertise in articles 1

advertising articles 2

Advertise under the article