ಕೆಮ್ಮಣ್ಣು ತೂಗು ಸೇತುವೆ ಬಳಕೆಗೆ ತಾತ್ಕಾಲಿಕ ನಿರ್ಬಂಧ
Saturday, January 7, 2023
ಉಡುಪಿ(Headlines Kannada): ತೋನ್ಸೆ ಮಂಡಲ ಪಂಚಾಯತ್ ಕಾಲದಲ್ಲಿ ತಿಮ್ಮಣ್ಣಕುದ್ರು ನಾಗರಿಕರ ಸಂಪರ್ಕಕ್ಕಾಗಿ ನಿರ್ಮಿಸಲಾಗಿರುವ ಕೆಮ್ಮಣ್ಣು ತೂಗು ಸೇತುವೆಯು ಪ್ರವಾಸಿ ತಾಣವಾಗಿ ಬಳಕೆಯಾಗುತ್ತಿದ್ದು, ಈ ತೂಗು ಸೇತುವೆಯು ಸದ್ಯ ಅಪಾಯಕಾರಿ ಸ್ಥಿತಿಯಲ್ಲಿರುವುದರಿಂದ, ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ತೂಗು ಸೇತುವೆಯ ಕುರಿತು ಸೂಚನೆಗಳನ್ನು ನೀಡಿದ್ದರೂ ಸಹ ಅದನ್ನು ಉಲ್ಲಂಘಿಸುವುದು ಕಂಡು ಬಂದ ಹಿನ್ನೆಲೆ, ಪಂಚಾಯತ್ ಸಾಮಾನ್ಯ ಸಭೆಯ ನಿರ್ಣಯದಂತೆ ಸೇತುವೆಯ ಪುನರ್ ನಿರ್ಮಾಣ ಆಗುವವರೆಗೆ ಸೇತುವೆ ಮೇಲೆ ಓಡಾಟಕ್ಕೆ ನಿರ್ಬಂಧಿಸಿ, ತಾತ್ಕಾಲಿಕವಾಗಿ ಮುಚ್ಚಲು ಕ್ರಮವಹಿಸಲಾಗಿದೆ ಎಂದು ತೋನ್ಸೆ ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ.