ಕುವೈಟ್ ಮಣಿಪುರ ಮುಸ್ಲಿಂ ಅಸೋಸಿಯೇಷನ್ ವಾರ್ಷಿಕ ಮಹಾಸಭೆ; ಸಮಾಜಸೇವಕ ಕರೀಂ ಬಿರಾಲಿ ಉಚ್ಚಿಲ, ಜಮಾಲ್ ಮಣಿಪುರ, ಅಬ್ದುಲ್ ನಾಸಿರ್'ಗೆ ಸನ್ಮಾನ

ಕುವೈಟ್ ಮಣಿಪುರ ಮುಸ್ಲಿಂ ಅಸೋಸಿಯೇಷನ್ ವಾರ್ಷಿಕ ಮಹಾಸಭೆ; ಸಮಾಜಸೇವಕ ಕರೀಂ ಬಿರಾಲಿ ಉಚ್ಚಿಲ, ಜಮಾಲ್ ಮಣಿಪುರ, ಅಬ್ದುಲ್ ನಾಸಿರ್'ಗೆ ಸನ್ಮಾನ

ಕುವೈಟ್ (Headlines Kannada): ಕೆಎಂಎಂಎ(ಕುವೈಟ್ ಮಣಿಪುರ ಮುಸ್ಲಿಂ ಅಸೋಸಿಯೇಷನ್) ಇದರ 2022ರ ವಾರ್ಷಿಕ ಮಹಾಸಭೆ ಶುಕ್ರವಾರ ಸಾಲ್ಮಿಯಾದ ಸುನ್ನಿ ಸೆಂಟರ್'ನಲ್ಲಿ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ KMMA ಗೌರವ ಅಧ್ಯಕ್ಷರಾದ ಜನಾಬ್ ಸೈಯ್ಯದ್ ಅಹ್ಮದ್ ಅವರ ಸಭಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನರವೇರಿತು.

ಕಾರ್ಯಕ್ರಮ ಆರಂಭದಲ್ಲಿ ರಹೀಂ ಕೃಷ್ಣಾಪುರ ಕಿರಾಅತ್ ಪಠಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ನಮ್ಮ ಸಂಘದ ಕೋಶಾಧಿಕಾರಿ ಇಬ್ರಾಹಿಂ ಮಣಿಪುರ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಟನೆಯನ್ನು ಸಂಘದ ಅಧ್ಯಕ್ಷರಾದ ಜಮಾಲ್ ಮಣಿಪುರ ನಿರ್ವಹಿಸಿದರು.









ನಮ್ಮ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಂತಹಾ KCF ಕುವೈಟ್ ಅಧ್ಯಕ್ಷರಾದ ಬಹು' ಹುಸೈನ್ ಉಸ್ತಾದ್ ಎರ್ಮಾಡ್ ಸಂಘ ಸಂಸ್ಥೆಗಳಲ್ಲಿ ಯಾವ ರೀತಿಯಲ್ಲಿ ಪ್ರವರ್ತಿಸಬೇಕು ಎಂದು ವಿವರಿಸಿದರು. 

ಕಾರ್ಯ್ರಮದ ಮತ್ತೊಂದು ಅತಿಥಿಯಾಗಿ ಹೆಲ್ತಿ ಚಾರಿಟಿಯ ಗೌರವ ಅಧ್ಯಕ್ಷರಾದ ಜನಾಬ್ ಮೊಹಿದ್ದೀನ್ ಸಾಹೇಬ್ ರವರು ಇವತ್ತಿನ ಜನಾಂಗದಲ್ಲಿ ದಾರಿ ತಪ್ಪುತ್ತಿರುವ ಯುವಕರ ಕುರಿತು ತಿಳಿಸಿದರು.

ಮತ್ತೊಂದು ಅತಿಥಿಯಾಗಿ ಭಾಗವಹಿಸಿದ ಕುವೈಟ್ ಜಹಾರ ಮಸೀದಿಯ ಇಮಾಮರು ಬಹು ಶಫೀಕ್ ಅಹ್ಸನಿ ರವರು ಜೀವಿಸಲು ನಮಗಿಂತ ಮೇಲೆ ಇರುವವರನ್ನು ನೋಡದೆ ನಮ್ಮ ಕೆಳಗಡೆ ಇರುವವರನ್ನು ನೋಡಿ ಜೀವಿಸಬೇಕು ಎಂದು ಉತ್ತಮ ಶಂದೇಶವನ್ನು ನೀಡಿದರು.

ಮತ್ತೊಂದು ಅತಿಥಿಯಾಗಿ ಮಾತನಾಡಿದ ಬದ್ರ್ ಅಲ್ ಸಮಾ ಮ್ಯಾನೇಜರ್ ಜನಾಬ್ ಅಬ್ದುಲ್ ರಝಾಕ್ ರವರು ಕಮಿಟಿ ಗಳನ್ನು ಉಪಯೋಗಿಸುವ ರೀತಿ ವಿವರಿಸಿದರು ಹಾಗೂ ನಮ್ಮ ಸಂಘದ ಸದಸ್ಯರಿಗೆ ಯಾವುದೇ ಸಹಾಯ ಬೇಕಿದ್ದಲ್ಲಿ ಬದ್ರ್ ಅಲ್ ಸಮಾ ಗೆ ಭೇಟಿ ನೀಡಿ ಎಂದು ಭರವಸೆ ನೀಡಿದರು.

ಕಾರ್ಯಕ್ರಮ ಅತಿಥಿಗಳಾಗಿ ಆಗಮಿಸಿದ್ದ ಜನಾಬ್ ಯೂಸುಫ್ ಸುರತ್ಕಲ್ KKMA ಅದ್ಯಕ್ಷರು ಹಾಗು ಜನಾಬ್ ಯೂಸುಫ್ ಮಾಂಚಕಲ್ DKSC ಅಧ್ಯಕ್ಷರು ಇವರು ಇಂದು ಒತ್ತಮ ಒಳ್ಳೆಯ ಒಂದು ಉಪದೇಶ ನೀಡಿದರು. ಅತಿಥಿಯಾಗಿ ಸಹಕರಿಸಿದ KCF ಸಾಲ್ಮಿಯ ಸೆಕ್ಟರ್ ಅಧ್ಯಕ್ಷರು ಬಹು ಕಾಸಿಂ ಉಸ್ತಾದ್ ಬೆಲ್ಮ ರವರು ಕೆಲವು ನಸೀಹತ್ ನಮಗೆ ಹೇಳಿಕೊಟ್ಟರು.

ನಮ್ಮ ಸಂಘದ ವತಿಯಿಂದ ಕರೀಂ ಬಿರಾಲಿ ಉಚ್ಚಿಲ ಹಾಗು ಜಮಾಲ್ ಮಣಿಪುರ ಮತ್ತು ಅಬ್ದುಲ್ ನಾಸಿರ್ ರವರನ್ನು ಸನ್ಮಾನಿಸಲಾಯಿತು.

ನಮ್ಮ ಕಾರ್ಯಕ್ರಮದ ಸಾರ್ವಜನಿಕ ಭಾಷಣದಲ್ಲಿ ಜನಾಬ್ ಅಬ್ದುಲ್ ಜಬ್ಬಾರ್ ಹಾಗು ಜನಾಬ್ ಅಬ್ದುಲ್ ಲತೀಫ್ ಮತ್ತು ಜನಾಬ್ ಶೌಕತ್ ಶಿರ್ವ ಮತ್ತು ಜನಾಬ್ ಅಬ್ದುಲ್ ಅಝೀಝ್ ಇವರು ಕೆಲವು ಹಿತ ನುಡಿಗಳನ್ನು ನುಡಿದರು. 2023 ರ ನಮ್ಮ KMMA ಸಂಘದ ಹೊಸ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೀಮಿಸಿಲಾಯಿತು.

ಸಮಿತಿಯಲ್ಲಿ ಗೌರವ ಅಧ್ಯಕ್ಷರಾಗಿ ಸೈಯ್ಯದ್ ಅಹ್ಮದ್, ಅಧ್ಯಕ್ಷರಾಗಿ ಜಮಾಲ್ ಮಣಿಪುರ, ಪ್ರದಾನ ಕಾರ್ಯದರ್ಶಿ ಸುಲೈಮಾನ್ ಉಚ್ಚಿಲ,  ಕೋಶಾಧಿಕಾರಿ ಇಬ್ರಾಹಿಂ ಮಣಿಪುರ,  ಹಾಗೂ 13 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಕೊನೆಯದಾಗಿ ನಮ್ಮ ಸಂಘದ ಗೌರವ ಅಧ್ಯಕ್ಷರಾದ ಸೈಯ್ಯದ್ ಅಹ್ಮದ್ ರವರು KMMA ಸಂಘ ನಡೆದು ಬಂದ ದಾರಿ ವಿವರಿಸಿದರು. ಜನಾಬ್ ಶೌಕತ್ ಶಿರ್ವ ಧನ್ಯವಾದ ಗೈದರು.

Ads on article

Advertise in articles 1

advertising articles 2

Advertise under the article