ಬೆಳಗಾವಿಯ ಹಿಂಡಲಗಾದಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಗುಂ#ಡಿನ ದಾ#ಳಿ
ಬೆಳಗಾವಿ(Headlines Kannada): ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಮೇಲೆ ಅಪರಿಚಿತರಿಂದ ಗುಂ#ಡಿನ ದಾ#ಳಿ ನಡೆದಿರುವ ಘಟನೆ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಬಳಿ ನಡೆದಿದೆ.
ಶನಿವಾರ ರಾತ್ರಿ ವಿರಾಟ್ ಹಿಂದೂ ಸಮಾವೇಶದ ಸಿದ್ಧತೆಯಲ್ಲಿ ತೊಡಗಿದ್ದ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತ್ಕರ್ ಮತ್ತು ಹಿಂದೂ ರಾಷ್ಟ್ರ ಸೇನಾ ಮುಖಂಡ ಮನೋಜ್ ದೇಸೂರಕರ್ ಗುಂ#ಡೇಟಿನಿಂದ ಗಾಯಗೊಂಡವರು. ರವಿ ಅವರ ಕುತ್ತಿಗೆ ಭಾಗಕ್ಕೆ ಗುಂ#ಡು ತಗಲಿದ್ದು, ತೀವ್ರ ರಕ್ತಸ್ರಾವವಾಗಿದ್ದು, ಮನೋಜ್ ಅವರ ಕೈಯಲ್ಲಿ ಗುಂ#ಡು ಹೊಕ್ಕಿದೆ ಎನ್ನಲಾಗಿದೆ. ಇಬ್ಬರನ್ನೂ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿಯಲ್ಲಿ ಜನವರಿ 8ರಂದು ಶ್ರೀರಾಮ ಸೇನೆಯಿಂದ ವಿರಾಟ್ ಹಿಂದೂ ಸಮಾವೇಶದ ಸಿದ್ಧತೆ ಮಾಡಲಾಗಿದೆ. ಇದರ ಸಾರಥ್ಯವಹಿಸಿರುವ ರವಿ ಹಾಗೂ ಅವರ ಸಹವರ್ತಿ ಮನೋಜ್ ಜೊತೆ ರಾತ್ರಿ 8ರ ಸುಮಾರಿಗೆ ಕಾರಿನಲ್ಲಿ ಸ್ಥಳಕ್ಕೆ ಹೊರಟಿದ್ದರು. ಕಾರು ಹಿಂಡಲಗಾದ ಮರಾಠಿ ಸರ್ಕಾರಿ ಶಾಲೆಯ ಬಳಿ ಬರುತ್ತಿದ್ದಂತೆ ಅಲ್ಲೇ ಕಾಯುತ್ತ ನಿಂತಿದ್ದ ಇಬ್ಬರು ದು#ಷ್ಕರ್ಮಿಗಳು ಏಕಾಏಕಿ ಗುಂ#ಡಿನ ದಾ#ಳಿ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.