'ತವಕ್ಕಲ್ ಓವರ್ಸೀಸ್ ದುಬೈ'ಯ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ದಾವೂದ್ ಆಯ್ಕೆ

'ತವಕ್ಕಲ್ ಓವರ್ಸೀಸ್ ದುಬೈ'ಯ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ದಾವೂದ್ ಆಯ್ಕೆ

ದುಬೈ (Headlines Kannada): ಧಾರ್ಮಿಕ ಹಾಗು ಸಾಮಾಜಿಕವಾಗಿ ಜನರಿಗೆ ಹಲವಾರು ಸೇವೆಯನ್ನು ನೀಡುತ್ತಾ ಬಂದಿರುವ 'ತವಕ್ಕಲ್ ಓವರ್ಸೀಸ್ ದುಬೈ' ಇದರ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ದಾವೂದ್ ಆಯ್ಕೆಯಾಗಿದ್ದಾರೆ.

ಶನಿವಾರ ಶಾರ್ಜಾದ ಅಲ್ ಖಸ್ಬಾದಲ್ಲಿ ನಡೆದ 'ತವಕ್ಕಲ್ ಓವರ್ಸೀಸ್ ದುಬೈ' ಇದರ  ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಸಂಸ್ಥೆಯ ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ಫಾಕ್ ಉಚ್ಚಿಲ, ಕಾರ್ಯದರ್ಶಿಯಾಗಿ ಮೊಹಮ್ಮದ್ ಫೈಝಲ್, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಝಬೀಹ್, ಲೆಕ್ಕ ಪರಿಶೋಧಕರಾಗಿ(Auditor) ರಾಹಿಲ್ ಅಬ್ದುಲ್ ರಝಕ್ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು. 

ಶಮೀರ್, ಅಬ್ದುಲ್ ರಝಕ್, ಇಲ್ಯಾಸ್ ಉಚ್ಚಿಲ, ಅಶ್ರಫ್ ಶೈಖ್, ಹಸನ್ ಅದ್ದು, ಅಝೀಮ್ ಅಶ್ರಫ್, ತೌಸೀನ್, ಆದಿಲ್ ಕೋಡಿ, ಅದ್ನಾನ್ ದಲ್ವಾಯ್, ಆಸಿಫ್ ಬೊಟ್ಟು, ಅಬ್ದುಲ್ ರಹೀಮ್, ಜಮಾಲ್ ಅಹ್ಮದ್, ಅಶ್ರಫ್ ದಲ್ವಾಯ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಮಾಡಲಾಯಿತು.Ads on article

Advertise in articles 1

advertising articles 2

Advertise under the article