
ಅಣ್ಣಾಮಲೈ ವಿರುದ್ಧ ಆಕ್ರೋಶ: ತಮಿಳುನಾಡು ಬಿಜೆಪಿಗೆ ರಾಜೀನಾಮೆ ನೀಡಿದ ನಾಯಕಿ ಗಾಯತ್ರಿ ರಘುರಾಮ್
Tuesday, January 3, 2023
ಚೆನ್ನೈ(Headlines Kannada): ತಮಿಳುನಾಡು ಬಿಜೆಪಿ ತೊರೆದಿರುವ ನಾಯಕಿ ಗಾಯತ್ರಿ ರಘುರಾಮ್, ತಮಿಳುನಾಡು ಬಿಜೆಪಿ ಘಟಕ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಬಿಜೆಪಿ ಅಧ್ಯಕ್ಷ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಟಿ ಹಾಗೂ ತಮಿಳುನಾಡು ಬಿಜೆಪಿ ಮಹಿಳಾ ಘಟಕದ ನಾಯಕಿ ಗಾಯತ್ರಿ ರಘುರಾಮ್ ಅವರು ಬಿಜೆಪಿಗೆ ಇಂದು ರಾಜೀನಾಮೆ ನೀಡಿದ್ದು, 'ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ, ಸಮಾನ ಅವಕಾಶಗಳು ಸಿಗುತ್ತಿಲ್ಲ, ಭಾರವಾದ ಹೃದಯದಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಅಣ್ಣಾಮಲೈ ಅವರ ನಾಯಕತ್ವದಲ್ಲಿ ತಮಿಳುನಾಡು ಘಟಕ ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ. ಈ ಕಾರಣದಿಂದಲೇ ನಾನು ಪಕ್ಷ ತೊರೆಯುತ್ತಿದ್ದೇನೆ ಎಂದು ಗಾಯತ್ರಿ ರಘುರಾಮ್ ಟ್ವೀಟ್ ಮಾಡಿದ್ದಾರೆ.