
ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: 8 ಮಂದಿ ಮೇಲೆ FIR: ಗೃಹ ಸಚಿವ ಆರಗ ಜ್ಞಾನೇಂದ್ರ
Wednesday, January 11, 2023
ಬೆಂಗಳೂರು(Headlineskannada): ಬೆಂಗಳೂರಲ್ಲಿ ಮಂಗಳವಾರ ನಡೆದ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಮೇಲೆ FIR ದಾಖಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ ಸಂಬಂಧಿಸಂತೆ ನಿನ್ನೆ ಎಫ್‌ಐಆರ್ ಆಗಿತ್ತು. ಆದರೆ ಹೆಸರುಗಳನ್ನ ಉಲ್ಲೇಖಿಸಿ ಎಫ್‌ಐಆರ್ ರಿಜಿಸ್ಟರ್ ಆಗಿರಲಿಲ್ಲ.ಆದರೆ ಈಗ FIRನಲ್ಲಿ ಹೆಸರು ಉಲ್ಲೇಖ ಆಗಿದೆ, 8 ಮಂದಿ ಹೆಸರನ್ನ ಸೇರಿಸಿ FIR ದಾಖಲಾಗಿದೆ ಎಂದು ಸ್ಪಷ್ಟಪಡಿಸಿದರು.
ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ), ನಿರ್ದೇಶಕ ಚೈತನ್ಯ, ಮೇಲ್ವಿಚಾರಕ ಲಕ್ಷ್ಮೀಪತಿ, ಜೆಇ ಪ್ರಭಾಕರ್, ಮಥಾಯಿ, ವಿಕಾಸ್ ಸಿಂಗ್, BMRCL ಎಂಜಿನಿಯರ್ ವೆಂಕಟೇಶ್ ಶೆಟ್ಟಿ, ಮಹೇಶ್ ಬೆಂಡೆಕೇರಿ ಸೇರಿದಂತೆ ಎಂಟು ಮಂದಿ ಮೇಲೆ FIR ದಾಖಲಾಗಿದೆ ಎಂದರು.