ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್: ಡಿಕೆಶಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್: ಡಿಕೆಶಿ



ಬೆಂಗಳೂರು(Headlineskannada): ಈ ಬಾರಿಯ ಚುನಾವಣಾ ಕದನ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಮತದಾರರನ್ನು ಸೆಳೆಯಲು ವಿಪಕ್ಷ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ 'ಗೃಹಜ್ಯೋತಿ' ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದೆ. 

ಇಂದು ಚಿಕ್ಕೋಡಿಯಲ್ಲಿ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌,  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಜನರ ಬದುಕಿಗೆ ಬೆಳಕು ನೀಡಲು ಪ್ರತಿ ಮನೆಗೆ 200 ಯೂನಿಟ್‌ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌  ಪ್ರಜಾಧ್ವನಿ ಬಸ್‌ ಯಾತ್ರೆಗೆ ಚಾಲನೆ ನೀಡಿದ್ದು, ಈ ಯಾತ್ರೆ ಮೂಲಕ ಜನರ ಸಮಸ್ಯೆ, ನೋವುಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು. ರಾಜ್ಯದ ಜನರ ಜನಜೀವನದಲ್ಲಿ ಬೆಳಕು ಚೆಲ್ಲುವುದು ಹಾಗು ಅವರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಪ್ರತಿಧ್ವನಿ ಬಸ್ ಯಾತ್ರೆಯ ಮುಖ್ಯ ಉದ್ದೇಶವಾಗಿದೆ’’ ಎಂದರು.

3 ವರ್ಷಗಳ ಹಿಂದೆ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ, ಒಂದರ ಮೇಲೆ ಒಂದು ಹಗರಣ ಮಾಡಿ, ಆ ಹಗರಣಗಳಲ್ಲಿ ಭಾಗಿಯಾಗಿರುವ ತನ್ನ ಸಚಿವರಿಗೆ ಕ್ಲೀನ್ ಚಿಟ್ ನೀಡುವ ಮೂಲಕ `ಬಿ-ರಿಪೋರ್ಟ್' ಸರ್ಕಾರವಾಯಿತು ಎಂದು ಡಿಕೆಶಿ ಆರೋಪಿಸಿದರು.

ರಾಜ್ಯ BJP ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಟೀಕಿಸಿದ ಡಿಕೆಶಿ, `ರಾಜ್ಯದ ಜನರಲ್ಲಿ ಕೋ#ಮುದ್ವೇ#ಷದ ಬೀಜಗಳನ್ನು ಸರಕಾರ ಬಿತ್ತುವಲ್ಲಿ ನಿರತವಾಗಿದೆ ಹಾಗು ಹೋಟೆಲ್ ಮೆನು ಕಾರ್ಡ್‌ನಂತೆ ಲಂಚಕ್ಕಾಗಿ ದರ ನಿಗದಿಪಡಿಸಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೋರಿದರು.

Ads on article

Advertise in articles 1

advertising articles 2

Advertise under the article